ಜನನ: ಜೂನ್ 1, 1937; ಮರಣ: ಆಗಸ್ಟ್ 25, 2021
ಬದಿಯಡ್ಕ: ಶ್ರೀಯುತ ಎಡಕ್ಕಾನ ರಾಮ ಭಟ್ ವಯೋಸಹಜ ಅಸೌಖ್ಯದಿಂದ ವಿಧಿವಶರಾಗಿದ್ದಾರೆ. ಅವರು ತಮ್ಮ ಪತ್ನಿ, ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಎಡಕ್ಕಾನ ರಾಮ ಭಟ್ಟರು ಶ್ರೀಮಠದ ಶಿಷ್ಯರಲ್ಲಿ ಒಬ್ಬರಾಗಿದ್ದು ಗುರುಗಳ ಅನುಗ್ರಹ ಪಡೆದವರು. ಶ್ರೀಮಠದ ಎಲ್ಲ ಕಾರ್ಯಕ್ರಮಗಳಲ್ಲಿ ಅತ್ಯಂತ ಮುತುವರ್ಜಿ ವಹಿಸಿ ಭಾಗವಹಿಸುತ್ತಿದ್ದರು. ಕಾಸರಗೋಡು ವಲಯದ ಗುರಿಕ್ಕಾರರಾಗಿ ಬಹಳ ಕಾಲ ಸೇವೆ ಮಾಡಿದ್ದರು.
ಕಂಬಾರು ಶ್ರೀ ದುರ್ಗಾ ಪರಮೇಶ್ವರಿ ದೇಗುಲದ ಆಡಳಿತ ಮೊಕ್ತೇಸರರಾದ ಅವರು ತಮ್ಮ ನಿವೃತ್ತ ಜೀವನದ ಎಲ್ಲಾ ಸಮಯವನ್ನು ಶ್ರೀದೇವಿಯ ಸೇವೆಗೆ ಮುಡಿಪಾಗಿಟ್ಟು ಜನುಮ ಸಾರ್ಥಕ್ಯ ಗಳಿಸಿಕೊಂಡು ದೇವಿ ಪದಗಳಲ್ಲಿ ಐಕ್ಯರಾದರು.
ವೃತ್ತಿ ಜೀವನದಲ್ಲಿ ಚಿಕ್ಕ ವಯಸ್ಸಿನಲ್ಲೇ ಸರಕಾರಿ ಶಾಲಾ ಮುಖ್ಯೋಪಾಧ್ಯಾಯ ಪದವಿಯನ್ನು ಅಲಂಕರಿಸಿ ಸುಧೀರ್ಘ ಸೇವೆಯನ್ನು ಸಲ್ಲಿಸಿದ್ದಾರೆ. ಅವರು ಸರಕಾರಿ ಪ್ರೌಢಶಾಲೆ ಮಂಗಲ್ಪಾಡಿ, ಜಿ.ಎಚ್.ಎಸ್ ಬೇಕೂರು, ಜಿವಿಎಚ್ಎಸ್ಎಸ್ ಅಡೂರು ಹಾಗೂ ಮಂಗಳೂರಿನ ಬದ್ರಿಯಾ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದರು.
ಧರ್ಮತ್ತಡ್ಕ ಶ್ರೀ ದುರ್ಗಪರಮೇಶ್ವರೀ ಶಾಲೆಯ ಮುಖ್ಯೋಪಾಧ್ಯರಾಗಿದ್ದು ಪ್ರಥಮ ಐದು ಎಸ್ಎಸ್ಎಲ್ಸಿ ಬ್ಯಾಚ್ಗಳನ್ನು ಯಶಸ್ವಿಯಾಗಿ ಸಂಪೂರ್ಣಗೊಳಿಸಲು ನೇತೃತ್ವವನ್ನು ವಹಿಸಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
Post a Comment