ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಾಳೆ ಕ್ರಾಂತಿ ಕವಿಗೋಷ್ಠಿ- 'ಕವಿ ಹೃದಯ ಸಂಕ್ರಾಂತಿ'

ನಾಳೆ ಕ್ರಾಂತಿ ಕವಿಗೋಷ್ಠಿ- 'ಕವಿ ಹೃದಯ ಸಂಕ್ರಾಂತಿ'



ಮಂಗಳೂರು: ಚುಟುಕು ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕವು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ  ಹಾಗೂ ಪಿಂಗಾರ ವಾರಪತ್ರಿಕೆ ಸಹಯೋಗದಲ್ಲಿ ಕವಿ ಹೃದಯ ಸಂಕ್ರಾಂತಿ ಎಂಬ ಕ್ರಾಂತಿ ಕವಿಗೋಷ್ಠಿಯನ್ನು ನಾಳೆ (ಆಗಸ್ಟ್ 28) ರಾತ್ರಿ 8 ಗಂಟೆಗೆ ಮಂಗಳೂರಿನಲ್ಲಿ ಆಯೋಜಿಸಿದೆ.


ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಮತ್ತು ಜನಪ್ರಿಯ ಪಂಚಭಾಷಾ ಕವಿ ಮಹಮ್ಮದ್ ಬಡ್ಡೂರು ಅವರು ವಹಿಸಲಿದ್ದು, ಹಿರಿಯ ಲೇಖಕ ನಾರಾಯಣ ರೈ ಕುಕ್ಕುವಳ್ಳಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಪ್ರಾಸ್ತಾವಿಕ ಭಾಷಣ ಮಾಡುವರು.


ದ.ಕ.ಜಿಲ್ಲಾ ಚುಸಾಪ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು, ಪಿಂಗಾರ ಪತ್ರಿಕೆ ಸಂಪಾದಕ ರೇಮಂಡ್ ಡಿಕುನಾ ತಾಕೊಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಕರ್ನಾಟಕ,ಆಂಧ್ರಪ್ರದೇಶ, ಕೇರಳ ಮತ್ತು ಮಹಾರಾಷ್ಟ್ರದಿಂದ ಒಟ್ಟು ಇಪ್ಪತ್ತು ಮಂದಿ ಆಯ್ದ ಕವಿಗಳು ಭಾಗವಹಿಸಲಿದ್ದಾರೆ.


ಮಂಗಳೂರಿನ ಸತ್ಯವತಿ ಭಟ್ ಕೊಳಚಪ್ಪು, ಆಂಧ್ರಪ್ರದೇಶದ ಅನಂತಪುರದಿಂದ ಸುಧಾ ಎನ್ ತೇಲ್ಕರ್, ಧಾರವಾಡದಿಂದ ಡಾ.ಸುಧಾ ಜೋಶಿ, ನವಿ ಮುಂಬೈಯಿಂದ ಶಾರದಾ ಎ. ಅಂಚನ್, ಉಡುಪಿಯಿಂದ ಪ್ರಭಾವತಿ ಶೆಡ್ತಿ ಕಾವಾಡಿ, ಮಂಗಳೂರಿನಿಂದ ಡಾ.ನಾರಾಯಣ ಕಾಯರ್ಕಟ್ಟೆ, ರೇಮಂಡ್ ಡಿಕುನಾ ತಾಕೊಡೆ, ರಶ್ಮಿ ಸನಿಲ್, ವಿಜೇಶ್ ದೇವಾಡಿಗ ಮಂಗಳಾದೇವಿ, ಡಾ.ಸುರೇಶ್ ನೆಗಳಗುಳಿ, ಡಾ.ಅರುಣಾ ನಾಗರಾಜ್, ಅರುಂಧತಿ ಎಸ್. ರಾವ್, ಗುಣಾಜೆ ರಾಮಚಂದ್ರ ಭಟ್,ಪುತ್ತೂರಿನಿಂದ ಹಂಸರಾಗ ಶೆಟ್ಟಿ ಗೋಳಿತೊಟ್ಟು, ಬೆಳಗಾವಿಯಿಂದ ಆನಂದ ಹಕ್ಕೆನ್ನವರ, ಉತ್ತರ ಕನ್ನಡದ ದಾಂಡೇಲಿಯಿಂದ ದೀಪಾಲಿ ಸಾಮಂತ, ಮಂಗಳೂರಿನಿಂದ ಆಕೃತಿ ಐ ಎಸ್ ಭಟ್, ಕಾಸರಗೋಡಿನಿಂದ ಹಿತೇಶ್ ಕುಮಾರ್ ಎ ನೀರ್ಚಾಲು, ಮಾಣಿಯಿಂದ ಮಾನಸ ವಿಜಯ್ ಕೈಂತಜೆ, ಪೆರ್ಲದಿಂದ ವಿಜಯ ಕಾನ ತಮ್ಮ ಕ್ರಾಂತಿ ಕವಿತೆಗಳನ್ನು ವಾಚಿಸುವರು.


ಕಾರ್ಯಕ್ರಮವು ಗೂಗಲ್ ಮೀಟ್ ವೆಬಿನಾರ್ ಮೂಲಕ ನಡೆಯಲಿದ್ದು, ಆಸಕ್ತರು https://meet.google.com/xqp-awte-ngz ಕೊಂಡಿ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು ಎಂದು ಪ್ರಕಟಣೆ ತಿಳಿಸಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post