ಯಾವುದೇ ಒಬ್ಬ ವ್ಯಕ್ತಿ ಕೊಲೆ ದರೇೂಡೆ ಮುಂತಾದ ಅಪರಾಧದ ಹಿನ್ನೆಲೆಯಲ್ಲಿ ಜೆೈಲು ವಾಸದಲ್ಲಿ ಇದ್ದು ಕೊನೆಗೂ ಯಾವುದೊ ಮಾನವೀಯತೆ ನೆಲೆಯಲ್ಲಿ ನ್ಯಾಯಾಲಯ ಅಂತಹ ಅಪರಾಧಿಗಳಿಗೆ ಕೆಲವೊಂದು ಷರತ್ತು ವಿಧಿಸಿ ಜಾಮೀನು ಕರುಣಿಸುತ್ತದೆ. ಇದರ ಅಥ೯ ಸೆರೆವಾಸದಿಂದ ಹೊರ ಬಂದ ವ್ಯಕ್ತಿ ಅಪರಾಧ ಮುಕ್ತ ಅನ್ನುವ ಅಥ೯ವಲ್ಲ. ಆತ ಅಪರಾಧಿಯೊ ನಿರಪರಾಧಿಯೋ ಅನ್ನುವುದನ್ನು ಕೇೂರ್ಟ್ ಮತ್ತೆ ವಿಚಾಣೆಯ ಮೂಲಕ ನಿರ್ಧರಿಸಬೇಕಾಗಿದೆ. ಇದಕ್ಕೆ ಸಾಕಷ್ಟು ಕಾಲಾವಕಾಶ ಬೇಕಾದ ಕಾರಣ ಮಾನವೀಯತೆಯ ನೆಲೆಯಲ್ಲಿ ನ್ಯಾಯಾಲಯ ಅಂತಹ ಆರೋಪಿಗಳಿಗೆ ಬಂಧನದಿಂದ ಸದ್ಯಕ್ಕೆ ಮುಕ್ತಿಗೊಳಿಸುವುದು ನ್ಯಾಯ ಕೂಡಾ.
ಅಂದರೆ ತನಿಖೆಗೆ ಯಾವುದೇ ತೊಂದರೆ ಆಗ ಬಾರದು ಕೊಲೆ/ದರೇೂಡೆ ಇತ್ಯಾದಿ ಗಂಭೀರ ಅಪರಾಧವೆಸಗಿದವರು ತಲೆಮರೆಸಿ ಕೊಳ್ಳಬಾರದು ಸಾಕ್ಷಿ ನಾಶ ಮಾಡಬಾರದು ಅಥವಾ ಇನ್ಯಾವುದೇ ತರದಲ್ಲಿ ಪ್ರತ್ಯಕ್ಷ ಯಾ ಪರೇೂಕ್ಷವಾಗಿ ನ್ಯಾಯಾಂಗದ ಮೇಲಾಗಲಿ ತನಿಖಾ ತಂಡದ ಮೇಲೆ ಪ್ರಭಾವ ಬೀರಬಾರದು ಎಂಬ ನೆಲೆಯಲ್ಲಿ ಸ್ವಲ್ಪ ಕಾಲ ಜೆೈಲಿಗೆ ಕಳುಹಿಸುತ್ತಾರೆ.
ಆದರೆ ಇತ್ತೀಚಿಗೆ ಕೆಲವೊಂದು ಪ್ರಭಾವಿ ರಾಜಕಾರಣಿಗಳು ತಾತ್ಕಾಲಿಕವಾಗಿ ಕೇೂರ್ಟಿನಿಂದ ಷರತ್ತು ಬದ್ದ ಜಾಮೀನು ಪಡೆದು ಜೆೈಲಿನಿಂದ ಹೊರಗೆ ಬರುವಾಗಲೇ ತಮ್ಮ ಅಭಿಮಾನಿಗಳನ್ನು ಪಕ್ಷದ ಕಾಯ೯ಕತ೯ರನ್ನು ಜೆೈಲಿನ ದ್ವಾರದಲ್ಲಿಯೇ ನಿಲ್ಲಿಸಿಕೊಂಡು ತೆರೆದ ವಾಹನದಲ್ಲಿ ಅದ್ದೂರಿಯ ಪುರ ಮೆರವಣಿಗೆಯಲ್ಲಿ ಬೀದಿ ಬೀದಿ ಸುತ್ತಿಸಿಕೊಂಡು ಹಾರ ತುರಾಯಿ ಜೆೈಕಾರದೊಂದಿಗೆ ಸ್ವಾಗತಿಸುವುದನ್ನು ನೇೂಡಿದಾಗ ಈ ಕೊಲೆ ಅಪರಾಧಿಗಳು ದೇೂಷ ಮುಕ್ತರೊ ಅನ್ನುವ ಥರದಲ್ಲಿ ಬಿಂಬಿಸುವ ಕಾರ್ಯ ನಡೆಯುತ್ತಿದೆ. ಇದನ್ನೆಲ್ಲಾ ನೇೂಡುವವರಿಗೆ ಇಷ್ಟು ದಿನ ಆತನನ್ನು ಸೆರೆವಾಸದಲ್ಲಿ ಇಟ್ಟಿದ್ದು ನ್ಯಾಯಾಲಯದ್ದೇ ತಪ್ಪು ಅನ್ನುವ ಹಾಗೆ ಅಭಿಪ್ರಾಯ ಮೂಡಿಸುವಂತಿದೆ. ಇದು ಒಂದು ತರದಲ್ಲಿ ಪ್ರತ್ಯಕ್ಷವಾಗಿ ನ್ಯಾಯಾಂಗ ವಿರುದ್ಧ ಶಕ್ತಿ ಪ್ರದರ್ಶನವೂ ಹೌದು. ನ್ಯಾಯಾಲಯಕ್ಕೆ ತಾನು ನಿರಾಪರಾಧಿ ಅನ್ನುವ ವಿಷಯವನ್ನು ತನ್ನ ಜನಬೆಂಬಲದ ಮೂಲಕ ತಿಳಿಸುವ ಪರೇೂಕ್ಷ ಅಸ್ತ್ರವೇ ಆಗಿರುತ್ತದೆ.
ಇಂತಹ ಗಂಭೀರವಾದ ಕೇಸುಗಳ ತನಿಖಾ ಹಂತದ ವ್ಯಕ್ತಿಗಳಿಗೆ ಜಾಮೀನು ನೀಡುವಾಗ ಬಹು ಮುಖ್ಯವಾಗಿ ವಿಧಿಸಬೇಕಾದ ಷರತ್ತು ಅಂದರೆ ಜೆೈಲಿನಿಂದ ಜಾಮೀನು ಮೂಲಕ ಹೊರಗೆ ಹೇೂಗುವಾಗ ಯಾವುದೇ ಹಾರ ತುರಾಯಿ ಮೆರವಣಿಗೆಯಲ್ಲಿ ಅಪರಾಧಿಗಳನ್ನು ಕರೆದೊಯ್ಯುವುದು ನ್ಯಾಯಾಂಗ ನಿಂದನೆ ಅನ್ನಿಸಿಕೊಳ್ಳುತ್ತದೆ ಮಾತ್ರವಲ್ಲ ಇಂತಹ ಸಂದರ್ಭದಲ್ಲಿ ವ್ಯಕ್ತಿಗಳಿಗೆ ನೀಡಿದ ಜಾಮೀನು ರದ್ದು ಮಾಡುವ ಹಕ್ಕು ನ್ಯಾಯಾಂಗಕ್ಕೆ ಇದೆ ಅನ್ನುವುದು ಜಾಮೀನು ನೀಡುವಾಗಲೇ ಸ್ವಷ್ಟವಾಗಿ ಸಂಬಂಧಿಸಿದವರಿಗೆ ತಿಳಿಸುವುದು ಸೂಕ್ತ ಅನ್ನುವುದು ನ್ಯಾಯಾಂಗ ಪೀಠಕ್ಕೆ ಸಾರ್ವನಿಕರ ಕಳಕಳಿಯ ಪ್ರಾರ್ಥನೆ. ಇದರಿಂದಾಗಿ ಪ್ರಜಾಪ್ರಭುತ್ವ; ಸಂವಿಧಾನದ ನ್ಯಾಯಾಂಗದ ಮೇಲಿನ ನಂಬಿಕೆ ಗೌರವ ಉಳಿಯಲು ಸಾಧ್ಯ ಅನ್ನುವುದು ನಮ್ಮ ಘನವೆತ್ತ ನ್ಯಾಯಾಂಗದಲ್ಲಿ ನಮ್ಮ ಕಳಕಳಿಯ ಪ್ರಾರ್ಥನೆಯೂ ಹೌದು.
-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق