ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಓಮ್ನಿ ಕಾರಿನ ಮೇಲೆ ಕಾಡಾನೆ ದಾಳಿ; ನಾಲ್ವರಿಗೆ ಗಂಭೀರ ಗಾಯ

ಓಮ್ನಿ ಕಾರಿನ ಮೇಲೆ ಕಾಡಾನೆ ದಾಳಿ; ನಾಲ್ವರಿಗೆ ಗಂಭೀರ ಗಾಯ



 ಚಿಕ್ಕಮಗಳೂರು;  ಚಲಿಸುತ್ತಿದ್ದ ಓಮ್ನಿ ಕಾರೊಂದರ ಮೇಲೆ ಏಕಾಏಕಿ ಕಾಡಾನೆ ದಾಳಿ ನಡೆಸಿದ ಪರಿಣಾಮ ಇಬ್ಬರು ಮಹಿಳೆಯರ ಸಹಿತ ನಾಲ್ವರು ಗಂಭೀರ ಗಾಯಗೊಂಡ ಘಟನೆಯೊಂದು ಮೂಡಿಗೆರೆ ತಾಲೂಕಿನ ಕುಂದೂರು ಬಳಿ ರವಿವಾರ ತಡರಾತ್ರಿ ನಡೆದಿರುವುದು ವರದಿಯಾಗಿದೆ.


ಗಾಯಾಳುಗಳನ್ನು ಚಂದ್ರೇಗೌಡ, ಅವರ ಪತ್ನಿ ಮೋಹಿನಿ, ಪುತ್ರ ಅವನೀಶ್, ಮತ್ತು ಸಂಬಂಧಿಕ ರಾಜಮ್ಮ ಎಂದು ಗುರುತಿಸಲಾಗಿದೆ. 


ಈ ಜೊತೆಗೆ ಚಂದ್ರೇಗೌಡರ ಸ್ಥಿತಿ ಚಿಂತಾಜನಕವಾಗಿದ್ದು, ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.


 ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೆಯ ದಾಳಿಗೊಳಗಾದ ಕಾರು ಬಹುತೇಕ ಜಖಂಗೊಂಡಿದೆ.


ಈ ನಾಲ್ವರು ಮೂಡಿಗೆರೆಯಿಂದ ಹೊರನಾಡಿಗೆ ಹೋಗುತ್ತಿದ್ದಾಗ ಹೆಬ್ಬಳಗದ್ದೆ ಎಂಬಲ್ಲಿ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಈ ಘಟನೆ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಧಾವಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم