ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗೃಹರಕ್ಷಕ ದಳ-ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆ: ದಕ ಜಿಲ್ಲೆಯ ಇಬ್ಬರು ಪುಟಾಣಿಗಳಿಗೆ ಬಹುಮಾನ

ಗೃಹರಕ್ಷಕ ದಳ-ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆ: ದಕ ಜಿಲ್ಲೆಯ ಇಬ್ಬರು ಪುಟಾಣಿಗಳಿಗೆ ಬಹುಮಾನ


ಮಂಗಳೂರು: 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗೃಹರಕ್ಷಕದಳದ ಇಲಾಖೆಯ 31 ಜಿಲ್ಲೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಮತ್ತು ಗೃಹರಕ್ಷಕ ಸದಸ್ಯರ 5 ರಿಂದ 15 ವರ್ಷ ವಯೋಮಿತಿಯ ಮಕ್ಕಳಿಗೆ “ಸ್ವಾತಂತ್ರ್ಯ ದಿನಾಚರಣೆ ಹಾಗೂ ದೇಶ ಭಕ್ತಿ” ಕುರಿತು ಪ್ರಬಂಧ ಸ್ವರ್ಧೆ, ಭಾಷಣ ಸ್ವರ್ಧೆ, ಚಿತ್ರಕಲೆ ಸ್ವರ್ಧೆ ಹಾಗೂ ಸಂಗೀತ ಸ್ವರ್ಧೆಗಳನ್ನು ಕೇಂದ್ರ ಕಛೇರಿಯಿಂದ ಹಮ್ಮಿಕೊಳ್ಳಲಾಗಿತ್ತು.


ಈ ಸ್ವರ್ಧೆಯಲ್ಲಿ ಪ್ರಥಮ ಬಹುಮಾನ ರೂ 5,000/-, ದ್ವಿತೀಯ ಬಹುಮಾನ ರೂ 3,000/- ಹಾಗೂ ತೃತೀಯ ಬಹುಮಾನ ರೂ 1,000/- ಬಹುಮಾನವನ್ನು ನಿಗದಿಪಡಿಸಲಾಗಿತ್ತು. ಈ ಸ್ವರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗೃಹರಕ್ಷಕದಳಕ್ಕೆ ಎರಡು ಬಹುಮಾನ ಲಭಿಸಿದೆ.


ಸಂಗೀತ ಸ್ವರ್ಧೆಯಲ್ಲಿ ಪ್ರಥಮ ಬಹುಮಾನ ಕುಮಾರಿ ನಿಧಿ ಜಿ, 7ನೇ ತರಗತಿ ಕೆನರಾ ಇಂಗ್ಲೀಷ್ ಮೀಡಿಯಂ ಶಾಲೆ, ಗೃಹರಕ್ಷಕದಳ ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ.ಎಸ್ ರವರ ಮಗಳಿಗೆ ದೊರಕಿದೆ ಹಾಗೂ ಚಿತ್ರಕಲಾ ಸ್ವರ್ಧೆಯಲ್ಲಿ ದ್ವಿತೀಯ ಬಹುಮಾನ ವೇದಾಂತ್ 2ನೇ ತರಗತಿ, ಸರಸ್ವತಿ ವಿದ್ಯಾ ಮಂದಿರ ಪುರುಷರಕಟ್ಟೆ ಶಾಲೆ, ಸುಳ್ಯ ಘಟಕದ ಗೃಹರಕ್ಷಕರಾದ ಪಿ.ಟಿ ಗಿರಿಧರ್ ಇವರ ಮಗನಿಗೆ ದೊರಕಿದೆ.  


0 تعليقات

إرسال تعليق

Post a Comment (0)

أحدث أقدم