ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಂಶೋಧನೆ ಪೇಪರ್‌ನಿಂದ ಜನರಿಗೆ ತಲುಪಲಿ: ಡಾ. ಧರ್ಮಾಧಿಕಾರಿ ಎನ್‌.ಎಸ್‌

ಸಂಶೋಧನೆ ಪೇಪರ್‌ನಿಂದ ಜನರಿಗೆ ತಲುಪಲಿ: ಡಾ. ಧರ್ಮಾಧಿಕಾರಿ ಎನ್‌.ಎಸ್‌




ಮಂಗಳೂರು: ಸಂಶೋಧನೆಯನ್ನು ಪೇಪರ್‌ನಿಂದ ಜನರ ಬಳಿಗೆ, ಪ್ರಯೋಗಾಲಯಗಳಿಂದ ಸಮಾಜಕ್ಕೆ ತಲುಪಿಸುವುದು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್‌) ಯ ಆಧ್ಯತೆಯಾಗಿದೆ, ಎಂದು ಶಿಕ್ಷಣ ತಜ್ಞ, ನ್ಯಾಕ್‌ ಮತ್ತು ಯುಜಿಸಿ ಸಮಿತಿ ಸದಸ್ಯ ಡಾ. ನಾಗನಾಥ್‌ ಧರ್ಮಾಧಿಕಾರಿ ಎನ್‌.ಎಸ್‌ ತಿಳಿಸಿದ್ದಾರೆ.


ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ), ʼನ್ಯಾಕ್‌ ಸಂಬಂಧಿಸಿದಂತೆ ಗುಣಮಟ್ಟ ವರ್ಧನಾ ತಂತ್ರಗಳುʼ ಎಂಬ ಕುರಿತು ಸೋಮವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಅವರು, ಕಾಲೇಜುಗಳ ಆಡಳಿತ ಮಂಡಳಿಗಳು ಜಾಗತಿಕ ದೃಷ್ಟಿಕೋನದೊಂದಿಗೆ, ಸಮಾಜಮುಖಿಯಾಗಿರುವುದು ತುಂಬಾ ಮುಖ್ಯ. ಪ್ರತಿ ಪ್ರಾಧ್ಯಾಪಕನೂ ತನ್ನ ಸಾಮರ್ಥ್ಯ ವೃದ್ಧಿಯ ಮೂಲಕ ಸಂಸ್ಥೆಗೆ ಕೊಡುಗೆ ನೀಡಬೇಕು. ನವೀನ ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳಿಗೆ ಗರಿಷ್ಠ ಲಾಭವಾಗುವಂತೆ ನೋಡಿಕೊಳ್ಳಬೇಕು, ಎಂದರು.


ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಡಾ. ಸುರೇಶ್‌ ಅತಿಥಿಗಳನ್ನು ಸ್ವಾಗತಿಸಿದರೆ, ಸಸ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಸಿದ್ಧರಾಜು ಎಂ.ಎನ್‌ ಧನ್ಯವಾದ ಸಮರ್ಪಿಸಿದರು.


ಕಂಪ್ಯೂಟರ್‌ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಿಕೆ ಡಾ. ಭಾರತಿ ಪಿಲಾರ್‌ ಕಾರ್ಯಕ್ರಮ ನಿರೂಪಿಸಿದರು. ನ್ಯಾಕ್‌ (ನಾಲ್ಕನೇ ಆವೃತ್ತಿ) ಸಂಯೋಜಕಿ ಡಾ. ಸುಧಾ ಎನ್‌.ವೈದ್ಯ, ಕಂಪ್ಯೂಟರ್‌ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ವೀರಭದ್ರಪ್ಪ, ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post