ಪುತ್ತೂರು: ವಿವೇಕಾನಂದ ಕಾಲೇಜಿನ IQAC ನೇಚರ್ ಕ್ಲಬ್, ಪ್ರಾಣಿಶಾಸ್ತ್ರ ವಿಭಾಗ ಹಾಗೂ ಸಸ್ಯಶಾಸ್ತ್ರ ವಿಭಾಗಗಳ ಸಂಯುಕ್ತ ದಲ್ಲಿ ಅನಾದಿಕಾಲದಿಂದಲೂ ವೃಕ್ಷರಾಜ ಎಂಬ ಅಗ್ರ ಖ್ಯಾತಿಗಳಿಸಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿ ಬಹುಭಾಷೆಗಳಲ್ಲಿ ವಿವಿಧ ನಾಮಗಳಿಂದ ಗುರುತಿಸಲ್ಪಡುವ ಅಶ್ವತ್ಥ ವೃಕ್ಷ ಭಾರತೀಯರ ಪವಿತ್ರ ವೃಕ್ಷವಾಗಿದೆ ಈ ವಿಷಯದ ಕುರಿತು 'ವೃಕ್ಷರಾಜಯ ತೇ ನಮ:' ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಜೂ.12 ರಂದು ಆನ್ಲೈನ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕಾಲೇಜಿನ ಸಂಸ್ಕೃತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಶಕುಮಾರ ಮಾತನಾಡಿ, ಅಶ್ವತ್ಥ ವೃಕ್ಷದ ಶ್ರೇಷ್ಠತೆ, ಫಲಾನುಫಲ, ಅನುಕೂಲತೆ ಹಾಗೂ ವೃಕ್ಷದ ಲಾಲನೆ-ಪಾಲನೆ ಅಗತ್ಯತೆಯ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಸಂಚಾಲಕಿ ಡಾ. ಸ್ಮಿತಾ ಪಿ.ಜಿ., ಕಾಲೇಜಿನ ಉಪನ್ಯಾಸಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಿಂಚನ.ಪಿ.ಭಟ್ ಸ್ವಾಗತಿಸಿ, ಅಪೇಕ್ಷಾ.ಕೆ ವಂದಿಸಿದರು. ನಿಶಿತಾ ಪ್ರಕಾಶ್ ಕಾರ್ಯಕ್ರಮವನ್ನು ನಿರೂಪಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment