ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚುಟುಕು ಸಾಹಿತ್ಯಕ್ಕೆ ಪತ್ರಿಕೆಗಳಲ್ಲಿ ಓದುಗರ ಸಂಖ್ಯೆ ಹೆಚ್ಚಾಗಿದೆ: ಬಿ ಎಂ ಮಾಣಿಯಾಟ್

ಚುಟುಕು ಸಾಹಿತ್ಯಕ್ಕೆ ಪತ್ರಿಕೆಗಳಲ್ಲಿ ಓದುಗರ ಸಂಖ್ಯೆ ಹೆಚ್ಚಾಗಿದೆ: ಬಿ ಎಂ ಮಾಣಿಯಾಟ್



ಮಂಗಳೂರು: ಪತ್ರಿಕೆಗಳಿಗೆ ಎಲ್ಲಾ ಪ್ರಕಾರಗಳ ಸಾಹಿತ್ಯವೂ ಬೇಕಾಗುತ್ತದೆ. ಅದರಂತೆ ಚುಟುಕು ಸಾಹಿತ್ಯವು ಪತ್ರಿಕೆಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದೆ. ಪತ್ರಿಕೆಗಳ ಶೀರ್ಷಿಕೆಯಿಂದ ಹಿಡಿದು ಭಗವದ್ಗೀತೆಯ ಶ್ಲೋಕಗಳೆಲ್ಲವೂ ಚುಟುಕು ಸಾಹಿತ್ಯದ ಪ್ರತಿರೂಪಗಳು.ಚುಟುಕು ಎಂದರೆ ಹರಿತವಾದ ಪಟ್ಟ ಪದ್ಯಗಳು.ಹಾಗಾಗಿ ಅವುಗಳಿಗೆ ಓದುಗರು ಹೆಚ್ಚು' ಎಂದು ಹಿರಿಯ ಪತ್ರಕರ್ತ, ಬಹುಭಾಷಾ ಕಾದಂಬರಿಕಾರ ಬಿ.ಎಂ.ಮಾಣಿಯಾಟ್ ಹೇಳಿದರು.


ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ವೆಬಿನಾರ್ ಮೂಲಕ ಮಂಗಳೂರಿನಲ್ಲಿ ಶನಿವಾರ (ಆಗಸ್ಟ್ 7) ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ 'ಪತ್ರಿಕೆಗಳಲ್ಲಿ ಚುಟುಕು ಸಾಹಿತ್ಯ' ಎಂಬ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾತಾನಾಡಿದರು.


ಯಾವುದೇ ಮತ ಗ್ರಂಥ ನೋಡಿದರೂ ಅದರಲ್ಲಿ ಚುಟುಕಾದ ವಿಷಯಗಳಿಗೆ ಮಹತ್ವ. ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರ ಚುಟುಕಗಳನ್ನು ಪ್ರಕಟಿಸದ ಕನ್ನಡ ಪತ್ರಿಕೆಗಳೇ ಇರಲಿಲ್ಲ. ಆ ಕಾಲದಲ್ಲಿ ಅದೊಂದು ಜನಪ್ರಿಯ ಸಾಹಿತ್ಯ ಪ್ರಕಾರವಾಗಿತ್ತು. ಯಾಂತ್ರಿಕವಾಗಿರುವ ಈ ಜಗತ್ತಿನಲ್ಲಿ ಎಲ್ಲವೂ ಚುಟುಕಾಗಿರುವುದೇ ಒಳ್ಳೆಯದು. ಓದುಗರಿಗೂ ಲೇಖಕರಿಗೂ ಅದೇ ಅಚ್ಚುಮೆಚ್ಚು ಎಂದು ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಚುಸಾಪ ಗೌರವಾಧ್ಯಕ್ಷ ಇರಾ ನೇಮು ಪೂಜಾರಿಯವರು ವಹಿಸಿದ್ದರು.


ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗೋವಿಂದ ದಾಸ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಪಿ.ಕೃಷ್ಣಮೂರ್ತಿ, ಜನಪ್ರಿಯ ಚುಟುಕು ಕವಿ ಬದ್ರುದ್ದೀನ್ ಕೂಳೂರು, ಚುಸಾಪ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಪರಿಷತ್ತಿನ ಉಪಾಧ್ಯಕ್ಷೆ ಡಾ. ಅರುಣಾ ನಾಗರಾಜ್ ಅವರು ಬಿ.ಎಂ.ಮಾಣಿಯಾಟ್ ಅವರನ್ನು ಪರಿಚಯಿಸಿದರು.


ಉಪನ್ಯಾಸದ ಬಳಿಕ ಸಂವಾದ ನಡೆಯಿತು. ಸಂವಾದದಲ್ಲಿ ಡಾ.ಸುರೇಶ್ ನೆಗಳಗುಳಿ, ಹಮೀದ ಬೇಗಂ ಸಂಕೇಶ್ವರ, ವಿಜೇಶ್, ರೇಖಾ ಸುದೇಶ್ ರಾವ್,ನಾರಾಯಣ ನಾಯ್ಕ್ ಕುದುಕೋಳಿ ಮೊದಲಾದವರು ಭಾಗವಹಿಸಿದರು. ರೇಖಾ ನಾರಾಯಣ್ ಪ್ರಾರ್ಥಿಸಿದರು. ವಿಜೇಶ್ ದೇವಾಡಿಗ ಮಂಗಳಾದೇವಿ ಕಾರ್ಯಕ್ರಮ ನಿರೂಪಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post