ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತುಳುವೆರ್ ಕುಡ್ಲ ನೂತನ ಸಂಘಟನೆಯ ಲೊಗೊ ಬಿಡುಗಡೆ ಮಾಡಿದ ಸಿಎಂ

ತುಳುವೆರ್ ಕುಡ್ಲ ನೂತನ ಸಂಘಟನೆಯ ಲೊಗೊ ಬಿಡುಗಡೆ ಮಾಡಿದ ಸಿಎಂ

 


ಬೆಂಗಳೂರು;  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿ ತುಳುವೆರ್ ಕುಡ್ಲ(ರಿ) ನೂತನ ಸಂಘಟನೆಯ 'ಲೊಗೊ'ವನ್ನು ಬಿಡುಗಡೆ ಮಾಡಿದರು.


ತುಳುಭಾಷೆಯನ್ನು ಕರ್ನಾಟಕ ರಾಜ್ಯದ ಅಧಿಕೃತ ರಾಜ್ಯಭಾಷೆಯನ್ನಾಗಿ ಘೋಷಣೆ ಮಾಡುವಂತೆ ಮನವಿ ಸಲ್ಲಿಸಲಾಯಿತು. ಹಾಗೂ "ತುಳು ಕೆಳಿಂಜ ಭಾರತ" ಎನ್ನುವ ತುಳುನಾಡಿಗೆ ಸಂಬಂಧಪಟ್ಟ ಪುಸ್ತಕವನ್ನು ಕೊಟ್ಟು ಮುಖ್ಯಮಂತ್ರಿಯನ್ನು ಸನ್ಮಾನಿಸಲಾಯಿತು.


ಈ ಸಮಯದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಹಾಗೂ ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್, ತುಳುವೆರ್ ಕುಡ್ಲ ಸಂಘಟನೆಯ ಅಧ್ಯಕ್ಷ ಪ್ರತೀಕ್ ಯು ಪೂಜಾರಿ, ಕೋಶಾಧಿಕಾರಿ ಚರಿತ್ ಪೂಜಾರಿ, ಕಾರ್ಯದರ್ಶಿ ಪ್ರತೀಕ್ ರಾವ್, ಸಂಘಟನಾ ಸಂಚಾಲಕ ರೋಶನ್ ರೇನೊಲ್ಡ್, ಸಹ ಸಂಚಾಲಕ ಕುಷಿತ್, ವರುಣ್ ಆಚಾರ್ಯ ಉಪಸ್ಥಿತರಿದ್ದರು.

0 تعليقات

إرسال تعليق

Post a Comment (0)

أحدث أقدم