ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಂದಿಗೆಂದು ಇಟ್ಟ ಉರುಳಿಗೆ ಬಿದ್ದ ಚಿರತೆ

ಹಂದಿಗೆಂದು ಇಟ್ಟ ಉರುಳಿಗೆ ಬಿದ್ದ ಚಿರತೆ

 


ಸವಣೂರು - ಹಂದಿಗೆಂದು ಇಟ್ಟ ಉರುಳಿಗೆ ಚಿರತೆಯೊಂದು ಬಿದ್ದ ಘಟನೆಯೊಂದು ಬೆಳ್ಳಾರೆ ಸಮೀಪ ಬುಧವಾರದಂದು ನಡೆದಿದೆ.


ಪೆರುವಾಜೆ ಗ್ರಾಮದ ಕಾನಾವು ಸಮೀಪದ ಪೆರುವಾಜೆ ಬ್ಲಾಕ್ ಅರಣ್ಯ ಪ್ರದೇಶದಲ್ಲಿ ಯಾರೋ ಅಪರಿಚಿತರು ಹಂದಿಗೆಂದು ಇಟ್ಟಿದ್ದ ಉರುಳು. ಬುಧವಾರ ಬೆಳಿಗ್ಗೆ ಚಿರತೆಯೊಂದು ಸಿಲುಕಿಕೊಂಡಿತ್ತು.


 ವಿಷಯ ತಿಳಿದ ತಕ್ಷಣ ಅರಣ್ಯಾಧಿಕಾರಿಗಳು ಅರಿವಳಿಕೆ ತಜ್ಞರನ್ನು ಕರೆಸಿ ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.


 ಆ ಬಳಿಕ ಬೋನಿಗೆ ಹಾಕಿ ಚಿರತೆಯನ್ನು ಪಶ್ಚಿಮ ಘಟ್ಟದ ಕಾಡಿಗೆ ಬಿಡಲಾಗಿದೆ. 


ಕಾರ್ಯಾಚರಣೆಯ ವೇಳೆಯಲ್ಲಿ ಪುತ್ತೂರು ಹಾಗೂ ಸುಳ್ಯ ಉಪವಿಭಾಗದ ಅರಣ್ಯಾಧಿಕಾರಿಗಳು ಸ್ಥಳದಲ್ಲಿದ್ದರು.

0 تعليقات

إرسال تعليق

Post a Comment (0)

أحدث أقدم