ಕಾಣುತ್ತಿದೆ ಹತ್ತಾರು ದೇವರಿರುವ ದೇಗುಲ
ಹಾರೈಸುತ್ತಿದೆ ಎಲ್ಲರಿಗೂ ಶುಭಮಂಗಳ
ಇಲ್ಲವೇ ಇಲ್ಲ ಬಂಧುವಲ್ಲವೆಂಬ ತಿರಸ್ಕಾರ
ಎಲ್ಲರಿಂದಲೂ ಪಡೆಯುತ್ತಿದೆ ಲಕ್ಷ ನಮಸ್ಕಾರ||
ಹುರುಪು ಪ್ರೋತ್ಸಾಹ ಸ್ವಾರಸ್ಯದ ಕಳೆ
ವಿದ್ಯೆ, ಶಿಸ್ತು, ತಾಳ್ಮೆಗಳನ್ನು ಕಲಿಸುವ ಶಾಲೆ
ಕೀರ್ತಿ ಪತಾಕೆಗಳನ್ನು ಹಾರಿಸುತ್ತಿರುವುದು
ಚಂದ್ರನಂತೆ ಕಾಂತಿ ಬೀರಿ ಬೆಳಗುತಿರುವುದು||
ಬೆಳಗುತ್ತಿದೆ ಇಲ್ಲಿಂದ ನೂರಾರು ಜ್ಯೋತಿ
ಶಿಕ್ಷೆ ಇಲ್ಲದ ಶಿಕ್ಷಣದಿ ಮೂಡುತ್ತಿದೆ ಕ್ರಾಂತಿ
ಸಾಕಾಗದು ಈ ಶಾಲೆಗೆ ನೂರಾರು ನಮನ
ಆಗುತ್ತಿದೆ ಅವಿದ್ಯೆ ಎಂಬ ರೋಗ ಶಮನ||
ವಿದ್ಯಾಧಿದೇವತೆ ಸರಸ್ವತಿ ಮಾತೆಯು
ನೆಲೆಸಿಹ ಸುಂದರ ಸರ್ಕಾರಿ ಮಾದರಿ ಶಾಲೆಯು
ಗುರುಗಳ ಪಾಠವು ,ಮಕ್ಕಳ ಒಡನಾಟವೂ
ಒಂದೆಡೆ ದೊರೆಯುವ ತಾಣವಿದು||
ಶಾಲೆಗೆ ಬರುವ ಹೋಗುವ ಸಮಯದಿ
ಮಾರ್ಗದ ಬದಿಯಲಿ ಮಕ್ಕಳ ದಿಬ್ಬಣ
ಶಿಸ್ತಿನ ಇರುವೆ ಸಾಲುಗಳಂತೆ
ವರ್ಣಿಸಲು ಪದಪುಂಜ ಸಾಲದು||
ತರತರ ಬಣ್ಣದ ಚಿಟ್ಟೆ ಗಳಂತೆ
ಕಣ್ಮನ ಸೆಳೆಯುವ ವೇಷಗಳಿಲ್ಲ
ಯಾರೇ ಆದರೂ ಹೇಗೇ ಇದ್ದರೂ
ಸಮವಸ್ತ್ರ ಧರಿಸುತಲಿ
ಒಂದೇ ಕನ್ನಡ ಮಾತೆಯ ಮಕ್ಕಳು
ನಾವು ಸಮಾನರು ಏನ್ನುತಲಿ
ಬೇಧ _ಭಾವ 'ವ ಮಾಡದೇ ಇಲ್ಲಿ
ಕಲಿಯುತ ಮುಂದಕೆ ಮಕ್ಕಳು ಸಾಗುವರು ||
ಉತ್ತಮ ಶಿಕ್ಷಣ ನೀಡುವ ಪರಿಣತಿ ಶಿಕ್ಷಕರಿಹರು
ಸಾವಿರಾರು ಮಕ್ಕಳು ಇಲ್ಲಿ ಕಲಿತಿಹರು
ಇಂದು ಉನ್ನತ ಹುದ್ದೆನ್ನೇರಿಹರು
ಸದಾ ಈ ಶಾಲೆಯನ್ನು ಮನದಲ್ಲೇ ನೆನೆಯುವರು||
ಚಿರಕಾಲ ಉಳಿಯಲಿ, ಬೆಳೆಯಲಿ
ಸದಾ ಅಭಿವೃದ್ಧಿ ಹೊಂದಲಿ
ಈ ಶಾಲೆಯೂ.
ಅನ್ನೋದೇ ನನ್ನ ಮನದ ಆಶಯವು||
✍️ಸಂಧ್ಯಾ ಕುಮಾರಿ, ಎಸ್ ವಿಟ್ಲ.
إرسال تعليق