ಬೆಂಗಳೂರು: ಸೂಸೈಡ್ ನೋಟ್ ಬರೆದಿಟ್ಟು ಇಡೀ ಕುಟುಂಬವೇ ನಾಪತ್ತೆಯಾಗಿರುವ ಘಟನೆಯೊಂದು ಬಾಗಲಗುಂಟೆಯಲ್ಲಿ ನಡೆದಿದೆ.
ಗಾಂಧಿ, ಶಾಲಿನಿ, ಭನುಶ್ರೀ, ಹೇಮಶ್ರೀ ನಾಪತ್ತೆಯಾದ ಕುಟುಂಬದ ಸದಸ್ಯರು. ಈ ಕುಟುಂಬದ ಚಿರಂಜೀವಿ ಎಂಬಾತ ತುಮಕೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು.
ಚಿರಂಜೀವಿ ಪ್ರತಿನಿತ್ಯ ಸಹೋದರಿ ಮತ್ತು ಪೋಷಕರ ಜೊತೆ ಮಾತನಾಡುತ್ತಿದ್ದ, ಆಗಸ್ಟ್ 12ರಂದು ಕರೆ ಮಾಡಿದಾಗ ಎಲ್ಲರ ಫೋನ್ ಸ್ವಿಚ್ ಆಫ್ ಆಗಿದ್ದು, ಇದರಿಂದ ಗಾಬರಿಗೊಂಡ ಚಿರಂಜೀವಿ, ಪೋಷಕರ ಮನೆ ಬಳಿಯಿದ್ದ ಸ್ನೇಹಿತನಿಗೆ ಮಾಹಿತಿ ತಿಳಿಸಿದ್ದಾನೆ.
ಆತನ ಸ್ನೇಹಿತ ಮನೆ ಬಳಿ ಹೋದಾಗ ಬೀಗ ಹಾಕಿದ್ದರು. ಮನೆ ಮಾಲೀಕರನ್ನು ವಿಚಾರಿಸಿದಾಗ, ಅವರು ಕುಟುಂಬ ಸಮೇತ ವಸ್ತುಗಳನ್ನೆಲ್ಲಾ ತೆಗೆದುಕೊಂಡು ಹೋಗಿದ್ದಾರೆ ಎಂದಿದ್ದಾರೆ. ಕೂಡಲೇ ಆತ ಈ ಮಾಹಿತಿಯನ್ನು ಚಿರಂಜೀವಿಗೆ ತಿಳಿಸಿದ್ದಾನೆ.
ಇದರಿಂದ ಗಾಬರಿಗೊಂಡ ಚಿರಂಜೀವಿ ಬೆಂಗಳೂರಿಗೆ ಬಂದು, ತನ್ನ ಬಳಿಯಿದ್ದ ನಕಲಿ ಕೀ ಬಳಸಿ ಮನೆಯ ಬಾಗಿಲು ತೆರೆದಾಗ ಕಿಟಕಿ ಬಳಿ ಡೆತ್ ನೋಟ್ ಪತ್ತೆಯಾಗಿದೆ.
ಅದರಲ್ಲಿ 'ನಮಗೆ ಜೀವನ ನಡೆಸಲು ತುಂಬಾ ಕಷ್ಟವಾಗುತ್ತಿದೆ. ನಮಗೆ ಈ ಜೀವನ ಬೇಡವೇ ಬೇಡ. ದಯಮಾಡಿ ನಮ್ಮನ್ನ ಸಾಯಲು ಬಿಡಿ' ಎಂದು ಕುಟುಂಬ ಸದಸ್ಯರು ಬರೆದಿದ್ದರು.
ಕೂಡಲೇ ಚಿರಂಜೀವಿ ಈ ಮಾಹಿತಿಯನ್ನು ಬಗಲಗುಂಟೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ.
ಇದೀಗ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು, ಕುಟುಂಬ ಸದಸ್ಯರಿಗಾಗಿ ಶೋಧ ನಡೆಸುತ್ತಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق