ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅನುವಂಶಿಕ ಸಂಶೋಧನೆ ಹಾಗೂ ಔಷಧ ತಯಾರಿಯಲ್ಲಿ ಶಿಲೀಂಧ್ರಗಳ ಪಾತ್ರ ಮಹತ್ವಪೂರ್ಣ: ಪ್ರೊ. ಜಿ.ಆರ್ ಜನಾರ್ದನ

ಅನುವಂಶಿಕ ಸಂಶೋಧನೆ ಹಾಗೂ ಔಷಧ ತಯಾರಿಯಲ್ಲಿ ಶಿಲೀಂಧ್ರಗಳ ಪಾತ್ರ ಮಹತ್ವಪೂರ್ಣ: ಪ್ರೊ. ಜಿ.ಆರ್ ಜನಾರ್ದನ


ಪುತ್ತೂರು: ಶಿಲೀಂಧ್ರಗಳು ಔಷಧಗಳ ಪ್ರಮುಖ ಮೂಲಗಳಾಗಿದ್ದು ಜೀವಸತ್ವಗಳು ಹಾಗೂ ಮದ್ಯಸಾರಗಳಂತಹ ಅನೇಕ ಉತ್ಪನ್ನಗಳ ತಯಾರಿಕಾ ಪ್ರಕ್ರಿಯೆಗಳಲ್ಲಿ ಬಳಸಲಾಗುತ್ತದೆ.


ಮರುಸಂಯೋಜಿತ ಡಿಎನ್‌ಎ ತಂತ್ರಜ್ಞಾನವು ಯೀಸ್ಟ್‌ಗಳು ಮತ್ತು ಇತರ ಶಿಲೀಂಧ್ರಗಳನ್ನು ಉಪಯೋಗಿಸಿ ಉಪಯುಕ್ತವಾದ ಕಿಣ್ವಗಳನ್ನು ಉತ್ಪಾದಿಸುವುದರಲ್ಲಿ ಯಶಸ್ವಿಯಾಗಿದೆ. ಮಣ್ಣಿನ ಮರುಬಳಕೆಯಲ್ಲಿ ಸಹಾಯಕವಾಗುವ ಶಿಲೀಂಧ್ರಗಳು ಪರಿಸರ ವ್ಯವಸ್ಥೆಯ ಪುನಃ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಸಸ್ಯಾರೋಗ್ಯ ಸಲಹೆಗಾರ, ಪ್ರಾಧ್ಯಾಪಕ, ಮಾನಸಗಂಗೋತ್ರಿಯ ಅಂತರ್ ರಾಷ್ಟ್ರೀಯ ಕೇಂದ್ರದ ನಿರ್ದೇಶಕ ಪ್ರೊ. ಜಿ. ಆರ್. ಜನಾರ್ದನ ಹೇಳಿದರು.

  Upayuktha


ಅವರು ಇಲ್ಲಿನ ವಿವೇಕಾನಂದ ಪದವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ, ನೇಚರ್ ಕ್ಲಬ್ ಹಾಗೂ ಐಕ್ಯೂಎಸಿ ಘಟಕದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ 'ಶಿಲೀಂಧ್ರಗಳ ಜೀವಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನ' ಎಂಬ ರಾಷ್ಟ್ರ ಮಟ್ಟದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.


ಶಿಲೀಂಧ್ರಗಳ ಪ್ರಾಮುಖ್ಯತೆಯ ಕುರಿತು ಹೆಚ್ಚಿನ ಮಾಹಿತಿ ಅವರು, ಶಿಲೀಂಧ್ರಗಳ ವರ್ಗಗಳ ಬಗ್ಗೆ ವಿವರಿಸಿ, ಹಲವು ಪ್ರಭೇದಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಕೆಲವು ಶಿಲೀಂಧ್ರಗಳು ಸಸ್ಯ, ಪ್ರಾಣಿ ಹಾಗೂ ಮಾನವರಿಗೆ ರೋಗಕಾರಕಗಳಾಗಿದ್ದರೂ ಇತರ ಹಲವಾರು ಶಿಲೀಂಧ್ರಗಳು ವೈದ್ಯಕೀಯ ಕ್ಷೇತ್ರದಲ್ಲಿ ಬಹುಪಯೋಗಿ ಆಗಿದ್ದು ರೋಗ ನಿವಾರಣೆಯಲ್ಲಿಯೂ ತನ್ನ ಛಾಪು ಮೂಡಿಸಿದೆ ಎಂದು ತಿಳಿಸಿದರು.


ಅನುವಂಶೀಯತೆಯ ಅಧ್ಯಯನ, ಜೈವಿಕ ತಂತ್ರಜ್ಞಾನದಲ್ಲಿ ಬಳಕೆಯನ್ನು ಕಂಡಿರುವ ಹಲವಾರು ಶಿಲೀಂಧ್ರಗಳು ಜೀವಕೋಟಿಯ ಉಳಿವಿಗೆ ಕಾರಣವಾಗಿದೆ ಎಂದು ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆನೀಡಿದರು.


ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ ಎನ್ ಅವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಂಪನ್ಮೂಲ ವ್ಯಕ್ತಿಯ ಅಗಾಧವಾದ ಜ್ಞಾನ ಹಾಗೂ ವಿಷಯ ಮಂಡನೆಯು ಶ್ಲಾಘನೀಯ ಎಂದರು. ಮಾತ್ರವಲ್ಲದೆ ಯುವ ಜನತೆ ಹೆಚ್ಚು ಹೆಚ್ಚು ಸಂಶೋಧನೆಯಲ್ಲಿ ತೊಡಗಿಕೊಳ್ಳಲು ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಐಕ್ಯೂಎಸಿ ಘಟಕದ ಸಂಯೋಜಕ ಪ್ರೊ. ಶಿವಪ್ರಸಾದ್ ಅವರು ಶುಭ ಹಾರೈಸಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ವಿಭಾಗದ ಉಪನ್ಯಾಸಕಿ ಹಾಗೂ ನೇಚರ್ ಕ್ಲಬ್ ನ ಸಂಯೋಜಕಿ ಡಾ. ಸ್ಮಿತಾ ಪಿ. ಜಿ ಸ್ವಾಗತಿಸಿದರು. ಉಪನ್ಯಾಸಕ ಡಾ. ಸೌಮಿತ್ರ ನಿರೂಪಿಸಿ ವಂದಿಸಿದರು. 


ಗೂಗಲ್ ಮೀಟ್ ನಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ರಾಜ್ಯ ಹಾಗೂ ಪರರಾಜ್ಯಗಳ ಹಲವಾರು ವಿದ್ಯಾರ್ಥಿಗಳು, ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post