ದೇರೆಬೈಲ್: ಶಿವಳ್ಳಿ ಸ್ಪಂದನ ದೇರೇಬೈಲು ವಲಯದ ಸರ್ವ ಸದಸ್ಯರಿಗೆ, ಇಂದು ಸಂಜೆ 4.00 ರಿಂದ 6.00 ರ ವರೆಗೆ ಅವರವರ ಮನೆಯಲ್ಲಿ ಕುಳಿತು ಗೂಗಲ್ ಮೀಟ್ ಮೂಲಕ ದೇರೆಬೈಲು ವಲಯದ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮತ್ತು ಸಂಪನ್ಮೂಲ ಗಣ್ಯರಿಂದ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶಿವಳ್ಳಿ ಸ್ಪಂದನ ದೇರೇಬೈಲು ವಲಯದ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕಲ್ಕೂರ ಪ್ರತಿಷ್ಠಾನ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕಲ್ಕೂರ ವಿಶೇಷ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಪ್ರಾರ್ಥನೆ ಬಳಿಕ ದೇಶ ಭಕ್ತಿಗೀತೆಗಳ ಗಾಯನ ನಡೆಯಲಿದೆ.
ವಲಯದ ಬಂಧುಗಳಿಗೆ ಸ್ವಾತಂತ್ರ್ಯ ದಿನದ ಶುಭಾಶಯ ಕೋರಲು ಮತ್ತು ಇದರ ಬಗ್ಗೆ ಮಾತಾಡಲು ತಲಾ ಒಬ್ಬರಿಗೆ 2 ನಿಮಿಷದ ಮುಕ್ತ ಅವಕಾಶವಿದೆ.
ವಲಯದ ಉದಯೋನ್ಮುಖ ಬಂಧುಗಳಿಂದ ಸಂಗೀತ ಮತ್ತು ವಾದ್ಯೋಪಕರಣಗಳನ್ನು ನುಡಿಸಲಿದ್ದಾರೆ. ಮಹಿಳಾ ಭಜನಾ ಮಂಡಳಿಯವರು ದೇಶಭಕ್ತಿ ಗೀತೆಗಳನ್ನು, ದೇವರ ನಾಮಗಳನ್ನು ಹಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಶಿವಳ್ಳಿ ಸ್ಪಂದನ ಮಂಗಳೂರು ದೇರೆಬೈಲು ವಲಯ ಕೊಂಚಾಡಿಯ ಕಾರ್ಯದರ್ಶಿ ಕೆ. ರಘುರಾಮ ರಾವ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಗುರುಪ್ರಸಾದ್ ಕಡಂಬಾರು
ಮೊ. 9380999424
ಕಾಂಚನ- ಮೊ. 9480288571
To join the meeting on Google Meet, click this link:
https://meet.google.com/ubd-gtks-xem
Or open Meet and enter this code: ubd-gtks-xem
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق