ಶಿರಾಳಕೊಪ್ಪ: ಇಲ್ಲಿನ ಪೊಲೀಸರ ಭರ್ಜರಿ ಬೇಟೆಯಲ್ಲಿ 5 ಠಾಣಾ ವ್ಯಾಪ್ತಿಯಲ್ಲಿ ದಾಖಲಾದ 10 ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 37 ಲಕ್ಷ ರೂ. ಮೌಲ್ಯದ ಕಳ್ಳತನವಾಗಿದ್ದ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶಿಕಾರಿಪುರ ವಾಸಿ ಮಂಜುನಾಥ್ ಎನ್ನುವವರು ಶಿರಾಳಕೊಪ್ಪ ರಸ್ತೆಯಲ್ಲಿ ಬೈಕ್’ನಲ್ಲಿ ನಿಂತಿದ್ದ ವೇಳೆ, 4 ಜನ ಅಪರಿಚಿತರು 2 ದ್ವಿಚಕ್ರವಾಹನಗಳಲ್ಲಿ ಬಂದು ಮಂಜುನಾಥ್ ರವರ ಕೊರಳಿನಲ್ಲಿದ್ದ ರೋಲ್ಡ್ ಗೋಲ್ಡ್ ಸರ, ನಗದು ಹಣ ಹಾಗೂ ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತಂತೆ ಪ್ರಕರಣ ದಾಖಲಾಗಿತ್ತು.
ತನಿಖೆ ಆರಂಭಿಸಿದ ಶಿಕಾರಿಪುರ ಸಿಪಿಐ, ಶಿರಾಳಕೊಪ್ಪ ಪಿಎಸ್’ಐ ನೇತೃತ್ವದ ತಂಡ ಸಂಡ ಗ್ರಾಮದ ಸೈಯದ್ ಇಸ್ರಾರ್ ಹಾಗೂ ಇರ್ಫಾನ್ ಅಹ್ಮದ್ ಹಾಗೂ ಒಬ್ಬ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಬಂಧಿಸಿದ್ದಾರೆ.
ಶಿರಾಳಕೊಪ್ಪ ಠಾಣೆ 4, ಶಿಕಾರಿಪುರ ಟೌನ್ ಠಾಣೆ 2, ದೊಡ್ಡಪೇಟೆ ಠಾಣೆ 1, ಕುಂಸಿ ಠಾಣೆ 1 ಹಾಗೂ ರಾಣೆಬೆನ್ನೂರು ಠಾಣೆ 1 ಪ್ರಕರಣ ಸೇರಿ ಒಟ್ಟು 10 ಪ್ರಕರಣಗಳಿಗೆ ಸೇರಿದ ಒಟ್ಟು ಮೌಲ್ಯ 37,68,900/- ರೂಗಳ 561 ಗ್ರಾಂ ಬಂಗಾರದ ಆಭರಣ, 9 ಕೆಜಿ 960 ಗ್ರಾಂ ಬೆಳ್ಳಿಯ ಸಾಮಗ್ರಿ, 06 ದ್ವಿ ಚಕ್ರ ವಾಹನ, 01 ಕಾರು ಹಾಗೂ 01 ಮೊಬೈಲ್ ಫೊನ್ ಅನ್ನು ವಶಪಡಿಸಿಕೊಳ್ಳಲಾಗಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment