2020ರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಪದವಿ ಹಂತದಲ್ಲಿ ಪ್ರಾರಂಭಿಸಿದರೆ ಕೆಲವೊಂದು ಮೂಲಭೂತ ಸಮಸ್ಯೆಗಳನ್ನು ಭಾಷಾ ವಿಷಯಗಳಲ್ಲಿ ಸೃಷ್ಟಿಸಬಹುದೆಂಬ ಪ್ರಶ್ನೆ ಈಗ ಉದ್ಬವಾದಂತಿದೆ.
ಬಹುಮುಖ್ಯವಾಗಿ ಸಮಸ್ಯೆಗಳು ಹುಟ್ಟಿಕೊಳ್ಳುವುದು ಭಾಷಾ ವಿಷಯಗಳಿಗೆ ಸಂಬಂಧ ಪಟ್ಟು.
1. ಇಲ್ಲಿ ಭಾಷಾ ವಿಷಯವಾಗಿ ಕನ್ನಡವನ್ನು ಕಡ್ಡಾಯವಾಗಿ ಅಧ್ಯಯನ ಮಾಡಬೇಕೆಂಬ ಒಂದು ಷರತ್ತು ಎದ್ದು ಕಾಣುತ್ತಿದೆ. ಒಂದು ವೇಳೆ ಕೆಲವೊಂದು ವಿದ್ಯಾರ್ಥಿಗಳಿಗೆ ಕನ್ನಡ ಓದು ಬರಹ ತಿಳಿಯದೇ ಇದ್ದರೆ ಅಂತಹ ವಿದ್ಯಾರ್ಥಿಗಳ ಗತಿಯೇನು? ಕಳೆದ ತರಗತಿಯಲ್ಲಿ ಇದನ್ನು ಓದದೇ ಇರುವ ಸಾಧ್ಯತೆಯೂ ಇದೆ. ಅಥವಾ ಹೊರ ರಾಜ್ಯದ ವಿದ್ಯಾರ್ಥಿಗಳು ಇರಬಹುದು.
2. ಮಾತ್ರವಲ್ಲ ಯಾವುದೇ ಭಾಷೆಯನ್ನು ಮಕ್ಕಳ ಕಲಿಕೆಯ ಮೇಲೆ ಕಡ್ಡಾಯ ಮಾಡ ಬಾರದು ಅನ್ನುವ ಸುಪ್ರೀಂ ಕೋಟಿ೯ನ ತೀಪು೯ ಕೂಡಾ ಇದೆ.
3. ಭಾಷಾ ಐಚ್ಛಿಕ ಆಯ್ಕೆಯಲ್ಲಿ ಇಂಗ್ಲಿಷ್ /ಹಿಂದಿ/ಸಂಸ್ಕೃತ /ಅಂತಿದೆ. ಇದರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳ ಬಹುದು ಅಂತಿದೆ. ಖಂಡಿತವಾಗಿಯೂ ಅತಿ ಹೆಚ್ಚಿನ ವಿದ್ಯಾರ್ಥಿಗಳು ಇಂಗ್ಲಿಷ್ ಅನ್ನೆ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಜಾಸ್ತಿ ಇದೆ. ಹಾಗೆನ್ನುವಾಗ ಸಂಸ್ಕೃತ ಹಿಂದಿ ಭಾಷೆಗಳ ಪಾಡೇನು? ಭಾಷೆ ಪಾಡು ಅನ್ನುವುದಕ್ಕಿಂತಲೂ ಶಿಕ್ಷಕರ ಪಾಡೇನು?
4. ಅದೆಷ್ಟೊ ಮಂದಿ ಈ ಭಾಷಾ ಪ್ರಾಧ್ಯಾಪಕರು ಕೆಲಸ ಕಳೆದುಕೊಳ್ಳುವ /ಬೇರೆ ಕಾಲೇಜುಗಳಿಗೂ ವರ್ಗವಾಗ ಬೇಕಾದ ಸಂದರ್ಭ ಬರಬಹುದು. ಈ ಸಂದರ್ಭದಲ್ಲಿ ಇದನ್ನು ಪ್ರಶ್ನಿಸಿ ನ್ಯಾಯಾಂಗದ ಮೊರೆ ಹೇೂದರೂ ಆಶ್ಚರ್ಯವಿಲ್ಲ.
5. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಭಾಷಾ ಕಲಿಕೆಯಲ್ಲಿ ಹೆಚ್ಚು ತಲೆ ಹಾಕ ಬಾರದಿತ್ತು. ಸಂಸ್ಕೃತ, ಹಿಂದಿ ಭಾಷಾ ಕಲಿಕೆಗೂ ಹೆಚ್ಚಿನ ಆದ್ಯತೆ ಕೊಡಬೇಕಿತ್ತು.
6. ಇನ್ನು ಈಗಾಗಲೇ ಸ್ಥಳೀಯ ಭಾಷೆ ಅನ್ನಿಸಿಕೊಂಡ ತುಳು ಇದು ತನ್ನ ಬೇರು ಕಳಚಿ ಕೊಂಡರೂ ಆಶ್ಚರ್ಯವಿಲ್ಲ.
ಈ ಎಲ್ಲಾ ಪ್ರಶ್ನೆಗಳಿಗೆ ಶಿಕ್ಷಣ ತಜ್ಞರಿಂದ ಉತ್ತರ ಸಿಗಬಹುದು ಅನ್ನುವುದು ನನ್ನ ನಿರೀಕ್ಷೆ.
-ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment