ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೊಬೈಲ್ ಕಳವು; ಆರೋಪಿಗಳ ಬಂಧನ, 40 ಮೊಬೈಲ್ ಫೋನ್, ಒಂದು ಕಾರು ವಶ

ಮೊಬೈಲ್ ಕಳವು; ಆರೋಪಿಗಳ ಬಂಧನ, 40 ಮೊಬೈಲ್ ಫೋನ್, ಒಂದು ಕಾರು ವಶ




ಯಾದಗಿರಿ: ಮೊಬೈಲ್‌ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿಗಳಿಂದ 2 ಲಕ್ಷ ಮೌಲ್ಯದ 40 ಮೊಬೈಲ್ ಫೋನ್‌ಗಳು, ಒಂದು ಕಾರು ವಶಕ್ಕೆ ಪಡೆದಿದ್ದಾರೆ.


ತೆಲಂಗಾಣದ ಆನಂದ, ಮೈಸೂರಿನ ಅಶ್ವಿನಿ ಬಂಧಿತರು.


ನಗರದ ಹಳೆ ಬಸ್‌ ನಿಲ್ದಾಣದಲ್ಲಿ ಸಂಶಯಾಸ್ಪದವಾಗಿ ಮಾರುತಿ ಕಾರಿನಲ್ಲಿ ತಿರುಗಾಡುತ್ತಿದ್ದ ಆರೋಪಿಗಳನ್ನು ನಗರ ಪೊಲೀಸ್‌ ಠಾಣೆಯ ಪಿಎಸ್‌ಐ ವೀರಣ್ಣ ಹಾಗೂ ಸಿಬ್ಬಂದಿ ವಿಚಾರಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.


'ಆರೋಪಿಗಳು ಯಾದಗಿರಿ, ಬಾಗಲಕೋಟೆ, ಬಳ್ಳಾರಿ, ಸವದತ್ತಿ ಸೇರಿದಂತೆ ವಿವಿಧ ಕಡೆ ಕಳವು ಮಾಡುತ್ತಿದ್ದರು.  ಕಾರಿನ ಬಾಗಿಲು ಬಳಿಯ ಸ್ಕ್ರೂ ತೆಗೆದು ಕಳವು ಮಾಡಿದ್ದ ಮೊಬೈಲ್‌ಗಳನ್ನು ಅಲ್ಲಿ ಸಂಗ್ರಹಿಸಿ ಹೈದರಾಬಾದ್‌ನಲ್ಲಿ ಮಾರಾಟ ಮಾಡುತ್ತಿದ್ದರು.


ಜನಸಂದಣಿ ಸ್ಥಳದಲ್ಲಿ ಸಣ್ಣ ಮಕ್ಕಳನ್ನು ಬಳಸಿಕೊಂಡು ಮೊಬೈಲ್ ಕಳ್ಳತನ ಮಾಡಿಸುತ್ತಿದ್ದರು. ನಂತರ ₹500, ₹1,000 ನೀಡುತ್ತಿದ್ದರು' ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.


ಈ ಬಗ್ಗೆ ಇಬ್ಬರ ವಿರುದ್ಧ ಯಾದಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم