ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಎಲೆಕ್ಟ್ರಿಕ್ ಆಟೋ ಚಲಾಯಿಸಿದ ಶಾಸಕ ಡಾ.ಭರತ್ ಶೆಟ್ಟಿ

ಎಲೆಕ್ಟ್ರಿಕ್ ಆಟೋ ಚಲಾಯಿಸಿದ ಶಾಸಕ ಡಾ.ಭರತ್ ಶೆಟ್ಟಿ

 



ಸುರತ್ಕಲ್‌: ಸರಕಾರದಿಂದ ಅರ್ಹ ಫಲಾನುಭವಿಗಳಿಗೆ ಸ್ವ ಉದ್ಯೋಗ ಮಾಡಲು ಕೊಡಲಾಗುವ ವಾಹನಗಳಲ್ಲಿ ಎಲೆಕ್ಟ್ರಿಕ್ ವಾಹನ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯುವುದಾಗಿ ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ.


ಸುರತ್ಕಲ್ ಕೃಷ್ಣಾಪುರದಲ್ಲಿ ಎಲೆಕ್ಟ್ರಿಕ್ ರಿಕ್ಷಾ ಡ್ರೈವ್ ಮಾಡಿದ ಶಾಸಕರು ಮಾಲಿನ್ಯ ರಹಿತ, ನಿಶ್ಯಬ್ದ ವಾಹನ ಹಾಗೂ ಅತೀ ಕಡಿಮೆ ವೆಚ್ಚದಲ್ಲಿ ಮುಂದಿನ ದಿನಗಳಲ್ಲಿ ಲಾಭದಾಯಕ ಸ್ವ ಉದ್ಯೋಗ ಆಗುವ ಎಲ್ಲಾ ಲಕ್ಷಣಗಳಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಎಲೆಕ್ಟ್ರಿಕ್ ರಿಕ್ಷಾ ಖರೀದಿಸಿ ಜೀವನ ನಡೆಸುತ್ತಿರುವ ಕಾರ್ಯಕರ್ತನನ್ನು ಅಭಿನಂದಿಸಿದರು. ಕೇಂದ್ರ ಸರಕಾರ ಮಾಲಿನ್ಯ ಕಡಿಮೆ ಮಾಡಲು ವಿದ್ಯುತ್ ಚಾಲಿತ ವಾಹನಗಳಿಗೆ ಭಾರೀ ಸಬ್ಸಿಡಿ ನೀಡಿ ಖರೀದಿಗೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ರಾಜ್ಯ ಸರಕಾರವೂ ಈ ಬಗ್ಗೆ ಹೆಚ್ವಿನ ಪ್ರೋತ್ಸಾಹ ನೀಡುತ್ತದೆ ಎಂದರು. ಪಾಲಿಕೆ ಸದಸ್ಯ ಲೋಕೇಶ್ ಬೊಳ್ಳಾಜೆ, ಬಿಜೆಪಿ ಕಾರ್ಯ ಕರ್ತರು ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم