ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜನಜಾಗೃತಿ ವೇದಿಕೆ: ವಾರ್ಷಿಕ ವರದಿ ಬಿಡುಗಡೆ

ಜನಜಾಗೃತಿ ವೇದಿಕೆ: ವಾರ್ಷಿಕ ವರದಿ ಬಿಡುಗಡೆ

 



ಉಜಿರೆ: ಜನಜಾಗೃತಿ ವೇದಿಕೆಯ ಬೆಳ್ತಂಗಡಿ ಪ್ರಾದೇಶಿಕ ವಿಭಾಗದ ವಾರ್ಷಿಕ ವರದಿ ಮತ್ತು ಪ್ರಾಕೃತಿಕ ದುರಂತಗಳು ಹಾಗೂ ನಿರ್ವಹಣೆ ಬಗ್ಯೆ ಮಾಹಿತಿ ಕೈಪಿಡಿಯನ್ನು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.


ಮದ್ಯವರ್ಜನ ಶಿಬಿರಗಳ ಮೂಲಕ ವ್ಯಸನಮುಕ್ತ ಆರೋಗ್ಯಪೂರ್ಣ ಸಮಾಜ ರೂಪಿಸುವಲ್ಲಿ ಜನಜಾಗೃತಿ ವೇದಿಕೆಯ ಸೇವೆಯನ್ನು ಹೆಗ್ಗಡೆಯವರು ಶ್ಲಾಘಿಸಿ ಅಭಿನಂದಿಸಿದರು.


ವಿಪತ್ತು ನಿರ್ವಹಣಾ ಸ್ವಯಂ ಸೇವಕರ ಸೇವಾ ಕಾರ್ಯ, ಪರಿಸರ ಸಂರಕ್ಷಣಾ ಕಾರ್ಯಕ್ರಮಗಳು ಕೂಡಾ ಸ್ಥಳೀಯರ ಸಹಕಾರದೊಂದಿಗೆ ಉತ್ತಮವಾಗಿ ಮೂಡಿ ಬರುತ್ತಿವೆ. ಕೊರೊನಾದಿಂದಾಗಿ ಮದ್ಯವರ್ಜನ ಶಿಬಿರಗಳು ಸ್ಥಗಿತಗೊಂಡರೂ ನವಜೀವನ ಸಮಿತಿಗಳನ್ನು ಬಲಪಡಿಸಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು. Upayuktha


ಪ್ರಸಕ್ತ ವರ್ಷ 150 ಮದ್ಯವರ್ಜನ ಶಿಬಿರಗಳ ಕ್ರಿಯಾ ಯೋಜನೆ ರೂಪಿಸಿದರೂ ಕೊರೊನಾದಿಂದಾಗಿ 145 ಶಿಬಿರಗಳನ್ನು ಆಯೋಜಿಸಲು ಅನನುಕೂಲವಾಗಿದೆ. ಆದರೆ 5 ವಿಶೇಷ ಶಿಬಿರಗಳ ಮೂಲಕ 322 ಮಂದಿಗೆ ಚಿಕಿತ್ಸೆ ಮತ್ತು ಸಲಹೆ ನೀಡಲಾಗಿದೆ ಎಂದು ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾೈಸ್ ಮಾಹಿತಿ ನೀಡಿದರು. ಈ ವರೆಗೆ ಒಟ್ಟು 1471 ಮದ್ಯವರ್ಜನ ಶಿಬಿರಗಳ ಮೂಲಕ 1,02,110 ಮದ್ಯವ್ಯಸನಿಗಳಿಗೆ ಮದ್ಯವರ್ಜನೆ ಬಗ್ಯೆ ಚಿಕಿತ್ಸೆ ನೀಡಲಾಗಿದೆ ಎಂದು ಅವರು ತಿಳಿಸಿದರು.


ಜನಜಾಗೃತಿ ವೇದಿಕೆಯ ಆಡಳಿತ ಸಮಿತಿ ಸದಸ್ಯರಾದ ಬೆಂಗಳೂರಿನ ವಿ. ರಾಮಸ್ವಾಮಿ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್, ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್, ಎಸ್. ಎನ್. ಯೋಜನಾಧಿಕಾರಿಗಳಾದ ಮೋಹನ್ ಮತ್ತು ಜೈವಂತ ಪಟಗಾರ ಹಾಗೂ ಸಹಾಯಕ ಪ್ರಬಂಧಕಿ ಭಾಗೀರಥಿ, ಯನ್. ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم