ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನೀರುಮಾರ್ಗ ಗ್ರಾ.ಪಂ. ವ್ಯಾಪ್ತಿಯಲ್ಲಿ ಜಲಜೀವನ್ ಮಿಶನ್ ಯೋಜನೆಗೆ ಶಂಕುಸ್ಥಾಪನೆ

ನೀರುಮಾರ್ಗ ಗ್ರಾ.ಪಂ. ವ್ಯಾಪ್ತಿಯಲ್ಲಿ ಜಲಜೀವನ್ ಮಿಶನ್ ಯೋಜನೆಗೆ ಶಂಕುಸ್ಥಾಪನೆ


ಮಂಗಳೂರು: 3 ಕೋಟಿ 60 ಲಕ್ಷ ಅನುದಾನದಲ್ಲಿ ನೀರುಮಾರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಲಜೀವನ್ ಮಿಶನ್ ಯೋಜನೆಗೆ ಶಾಸಕರಾದ ಡಾ.ಭರತ್ ಶೆಟ್ಟಿಯವರು ಮಂಗಳವಾರ ಶಂಕು ಸ್ಥಾಪನೆ ನೆರವೇರಿಸಿದರು.


ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಜಲಜೀವನ್ ಯೋಜನೆ; ಮನೆಮನೆಗೆ ಗಂಗೆ ಬೊಂಡಂತಿಲ ಗ್ರಾಮದಲ್ಲಿ 149.50 ಲಕ್ಷ ಹಾಗೂ ನೀರುಮಾರ್ಗ ಗ್ರಾಮದಲ್ಲಿ 210.99 ಲಕ್ಷ ರೂಪಾಯಿ ಅನುದಾನದಲ್ಲಿ ಅನುಷ್ಠಾನಕ್ಕೆ ಬರಲಿದೆ.


ಶಾಸಕರೊಂದಿಗೆ ನೀರುಮಾರ್ಗ ಗ್ರಾಮಪಂಚಾಯತ್ ಅಧ್ಯಕ್ಷೆ ಧನವಂತಿ, ಉಪಾಧ್ಯಕ್ಷೆ ಯಶೋಧ, ಎಲ್ಲ ಗ್ರಾಮ ಪಂಚಾಯತ್ ಸದಸ್ಯರಗಳು, ಫಲಾನುಭವಿಗಳ ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ಗೋಕುಲ್ ದಾಸ್ ಶೆಟ್ಟಿ, ಸಚಿನ್ ಹೆಗ್ಡೆ ಮಹಾ ಶಕ್ತಿ ಕೇಂದ್ರ ಅಧ್ಯಕ್ಷರು, ಸದಸ್ಯರಾದ ಚೇತನ್ ನಟ್ಟಿಲ್, ಕಿಶೋರ್ ಕುಮಾರ್ ಸಹಕಾರ ಪ್ರಕೋಷ್ಠಮಂಡಲ ಸದಸ್ಯರು, ಪ್ರಸನ್ನ ಮಂಡಲ ಯುವ ಮೋರ್ಚಾ ಉಪಾಧ್ಯಕ್ಷ,ಚೇತನ್ ಮಹಾಶಕ್ತಿ ಕೇಂದ್ರ ಸದಸ್ಯರು, ಶಕ್ತಿ ಕೇಂದ್ರ ಪ್ರಮುಖರಾದ ಜೀವನ್ ಮಾಡ್ರಬೈಲ್, ಯಶ್ವಿನ್ ಎನ್ ಕುಂದರ್, ಸಂಜೀವ ಮಜಲು ಹಾಗೂ ಗ್ರಾಮ ಪಂಚಾಯತ್ ಸದಸ್ಯರುಗಳು, ರಿಕ್ಷಾ ಚಾಲಕರ ಮಾಲಕ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಹಾಗೂ ಪಕ್ಷದ ಪ್ರಮುಖರು, ಬೂತ್ ಅಧ್ಯಕ್ಷರುಗಳು, ಪಂಚಾಯತ್ ಪಿಡಿಒ ಸುಧೀರ್, ಕಾರ್ಯದರ್ಶಿ ಸೌಮ್ಯಾ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post