ಮಂಗಳೂರು: ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಶಕ್ತಿ ನಗರ ಇದರ ಜಂಟಿ ಆಯೋಜನೆಯಲ್ಲಿ ಪಮ್ಮದ ಯಾನೆ ದೈವಾದಿಗರ ಸಮಾಜ ಭವನ ಗಂಧಕಾಡು ಮತ್ತು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಮುಗ್ರೋಡಿಯಲ್ಲಿ ತಲಾ 150 ಜನರಂತೆ ಒಟ್ಟು 300 ಜನರಿಗೆ ಇಂದು ಕೋವಿಡ್ ಲಸಿಕೆ ನೀಡಲಾಯಿತು.
ಈ ಎರಡು ಪ್ರತ್ಯೇಕ ಶಿಬಿರಗಳಿಗೆ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಭೇಟಿ ನೀಡಿ ಆಯೋಜನೆಯನ್ನು ಪರಿಶೀಲಿಸಿ, ಲಸಿಕಾ ಶಿಬಿರಕ್ಕೆ ಸ್ಥಳಾವಕಾಶ ನೀಡಿದ ಪಮ್ಮದ ಯಾನೆ ದೈವಾದಿಗರ ಸಮಾಜ ಸಂಘ ಗಂಧಕಾಡು ಮತ್ತು ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಮುಗ್ರೋಡಿ ಇವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಸಂಗೀತಾ ಆರ್ ನಾಯಕ್, ಸಂದೀಪ್ ಪಚ್ಚನಾಡಿ ಮಂಡಲ ಪ್ರಧಾನ ಕಾರ್ಯದರ್ಶಿ, ಪ್ರಶಾಂತ್ ಪೈ ಮಂಡಲ ಫಲಾನುಭವಿಗಳ ಪ್ರಕೋಷ್ಠ ಪ್ರಮುಖ್, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷರಾದ ರಾಮ ಮುಗ್ರೋಡಿ, ಪಕ್ಷದ ವಿವಿಧ ಜವಾಬ್ದಾರಿ ಹೊಂದಿರುವ ಇನ್ನುಳಿದ ಪ್ರಮುಖರು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment