ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಐವರ್ನಾಡು; 300 ಡೋಸ್ ಕೋವಿಡ್ ಲಸಿಕೆ ಶಿಬಿರ

ಐವರ್ನಾಡು; 300 ಡೋಸ್ ಕೋವಿಡ್ ಲಸಿಕೆ ಶಿಬಿರ

 


ಸುಳ್ಯ ; ಕೋವಿಡ್ ಲಸಿಕಾ ಶಿಬಿರ

ಐವರ್ನಾಡು ಗ್ರಾಮ ಪಂಚಾಯತ್, ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರ, ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಹಾಗೂ ಮಂಜುಶ್ರೀ ಗೆಳೆಯರ ಬಳಗ (ರಿ) ಪಾಲೆಪ್ಪಾಡಿ ಇದರ ಸಹಯೋಗದೊಂದಿಗೆ ದಿನಾಂಕ 28/08/2021 ನೇ ಶನಿವಾರ ಪೂ.ಗಂಟೆ 10.00 ರಿಂದ ಅಂಗನವಾಡಿ ಕೇಂದ್ರ ಪಾಲೆಪ್ಪಾಡಿಯಲ್ಲಿ ಒಟ್ಟು 300 ಡೋಸ್ ಕೊರೋನಾ ಲಸಿಕಾ ಶಿಬಿರವನ್ನು ಆಯೋಜಿಸಲಾಗಿದೆ. 


ಆದರೆ ಅಂಗನವಾಡಿ ಕೇಂದ್ರ ಪಾಲೆಪ್ಪಾಡಿಯಲ್ಲಿ ನೆಟ್ ವರ್ಕ್ ಸಮಸ್ಯೆಯಿರುವುದರಿಂದ ಹಾಗೂ 300 ಡೋಸ್ ಕೋವಿಡ್ ಲಸಿಕೆ ಇರುವುದರಿಂದ ಅಂಗನವಾಡಿ ಕೇಂದ್ರ ಪಾಲೆಪ್ಪಾಡಿಯಿಂದ  ಕೋವಿಡ್ ಲಸಿಕಾ ಶಿಬಿರವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐವರ್ನಾಡಿಗೆ  ಸ್ಥಳಾಂತರಿಸಲಾಗಿದೆ.

0 Comments

Post a Comment

Post a Comment (0)

Previous Post Next Post