ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗಮಕ ಶ್ರಾವಣ: ರಾಮಾಯಣ ಸಾರ್ವಕಾಲಿಕ ಸತ್ಯ, ಮಹಾಕಾವ್ಯ, ಇತಿಹಾಸ

ಗಮಕ ಶ್ರಾವಣ: ರಾಮಾಯಣ ಸಾರ್ವಕಾಲಿಕ ಸತ್ಯ, ಮಹಾಕಾವ್ಯ, ಇತಿಹಾಸ



ಮ೦ಗಲ್ಪಾಡಿ: ಆದಿಕಾವ್ಯವಾಗಿರುವ ರಾಮಾಯಣವು ಅತ್ಯಂತ ಜನಪ್ರಿಯವಾಗಿರುವ ಸಾರ್ವಕಾಲಿಕ ಸತ್ಯವಾದ ಪುಣ್ಯಕಥೆ. ಪ್ರಪಂಚದ ಸಕಲ ಭಾಷೆಗಳಿಗೂ ಅನುವಾದಗೊಂಡಿರುವ ರಾಮಾಯಣವು ನಿಜವಾಗಿಯೂ ನಾವೆಲ್ಲರೂ ಆರಾಧಿಸಲೇಬೇಕಾದ ಮಹಾಕಾವ್ಯವೂ ಹೌದು, ಇತಿಹಾಸವೂ ಹೌದು ಎ೦ಬುದಾಗಿ ಶ್ರೀ ರಾಮಚಂದ್ರ ಬೇರುಗೋಳಿ ಅಭಿಪ್ರಾಯಪಟ್ಟರು.


ಕರ್ನಾಟಕ ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕ ಮತ್ತು ಸಿರಿಗನ್ನಡ ವೇದಿಕೆಯ ಕೇರಳ ಘಟಕದ ಸಂಯುಕ್ತ ಆಶ್ರಯದಲ್ಲಿ ಮಂಗಲ್ಪಾಡಿ ರಾಮ ಕಾರಂತರ ಮನೆಯ 'ಸಾಕ್ಷಾತ್ಕಾರ' ಸಭಾಂಗಣದಲ್ಲಿ ಗುರುವಾರ ಜರಗಿದ ಗಮಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಭಾಗವಹಿಸಿದ್ದರು.


ಸಮಾರಂಭದ ಅಧ್ಯಕ್ಷತೆಯನ್ನು ಪರಿಷತ್ತಿನ ಅಧ್ಯಕ್ಷ ತೆಕ್ಕೆಕೆರೆ ಶಂಕರನಾರಾಯಣ ಭಟ್ಟರು ವಹಿಸಿದ್ದರು. ತೊರವೆ ರಾಮಾಯಣದಿಂದ ಆಯ್ದ ಚೂಡಾಮಣಿ ಪ್ರಸಂಗದ ಭಾಗವನ್ನು ಶ್ರೀಮತಿ ದಿವ್ಯಾ ಕಾರಂತ ಸುಶ್ರಾವ್ಯವಾಗಿ ವಾಚನ ಮಾಡಿದರು. ಶ್ರೀಮತಿ ಜಯಲಕ್ಷ್ಮೀ ಕಾರಂತ ಅವರು ಭಾವಪೂರ್ವಕವಾಗಿ ವ್ಯಾಖ್ಯಾನಗೈದರು.


ಶ್ರೀಯುತ ರಾಮ ಕಾರಂತ ಅವರು ಸ್ವಾಗತವನ್ನು ಬಯಸಿದರು, ಪ್ರೊ. ಪಿಯನ್, ಮೂಡಿತ್ತಾಯ ಅವರು ಸಮಾರಂಭದ ಅವಲೋಕನ ಮಾಡಿದರು. ಪಿ.ಬಿ. ಕುಳಮರ್ವ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದರು. ಶ್ರೀ ಚಂದನ್ ಕಾರಂತ ಅವರು ವಂದನಾರ್ಪಣೆ ಗೈದರು. ಕೋವಿಡ್ ಮಾನದಂಡದೊಡನೆ ಕಾರ್ಯಕ್ರಮವನ್ನು ನಡೆಸಲಾಗಿತ್ತು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم