ಕಾಸರಗೋಡು :ಮೀನುಗಾರಿಕೆ ವೇಳೆಯಲ್ಲಿ ದೋಣಿ ನದಿಯಲ್ಲಿ ಮುಳುಗಿ ಮೀನುಗಾರ ಮೃತಪಟ್ಟ ಘಟನೆಯೊಂದು ಉದುಮ ಸಮೀಪದ ಹೊಳೆಯಲ್ಲಿ ನಡೆದಿದೆ.
ಚೆಂಬರಿಕ ನಿವಾಸಿ ಅಹ್ಮದ್ ಯಾನೆ ಆಮು(60) ವರ್ಷ ಮೃತಪಟ್ಟವರು. ಅವರು ಇಂದು ಬೆಳಗ್ಗೆ ನದಿಯಲ್ಲಿ ಮೀನು ಹಿಡಿಯಲು ಬಲೆ ಬೀಸುತ್ತಿದ್ದಾಗ ಆಕಸ್ಮಿಕವಾಗಿ ದೋಣಿ ಮಗುಚಿ ಈ ದುರಂತ ಸಂಭವಿಸಿದೆ.
ಹತ್ತಿರದಲ್ಲಿದ್ದವರು ಕೂಡಲೇ ಅಹ್ಮದ್ ಅವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಕರೆದೊಯ್ದರು ಜೀವ ಉಳಿಸಲಾಗಲಿಲ್ಲ ಎಂದು ತಿಳಿದುಬಂದಿದೆ.
ಈ ಬಗ್ಗೆ ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Post a Comment