ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜಯಶ್ರೀಯವರ ಸಾಧನೆ ಇತರರಿಗೂ ಪ್ರೇರಣೆಯಾಗಲಿ: ಹರೀಶ್‌ ಆಚಾರ್‌

ಜಯಶ್ರೀಯವರ ಸಾಧನೆ ಇತರರಿಗೂ ಪ್ರೇರಣೆಯಾಗಲಿ: ಹರೀಶ್‌ ಆಚಾರ್‌



ಮಂಗಳೂರು: ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬಂತೆ ತಮ್ಮ 44ನೇ ವಯಸ್ಸಿನಲ್ಲಿ ಎಸ್‌.ಎಸ್‌.ಎಲ್‌.ಸಿ ಪಾಸಾಗಿ ಅಪೂರ್ವ ಸಾಧನೆ ಮಾಡಿರುವ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಗುಮಾಸ್ತರಾಗಿರುವ ಜಯಶ್ರೀ ಅವರನ್ನು ಶುಕ್ರವಾರ ಜಿಲ್ಲೆಯ ಸಹಕಾರಿ ರಂಗದ ಧುರೀಣರು ಭೇಟಿಮಾಡಿ ಆತ್ಮೀಯವಾಗಿ ಸನ್ಮಾನಿಸಿದರು.

 

ವಿಶ್ವಕರ್ಮ ಕೋ ಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌ ಮತ್ತು ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಕೇಂದ್ರಗಳ ಅಧ್ಯಕ್ಷ ಹರೀಶ್‌ ಆಚಾರ್‌, ಕರಾವಳಿ ಕ್ರೆಡಿಟ್‌ ಕೋಆಪರೇಟಿವ್‌ ಸೊಸೈಟಿ ಅಧ್ಯಕ್ಷ ಎ ಎಸ್‌ ವೆಂಕಟೇಶ್‌, ಒಡಿಯೂರು ವಿವಿದೋದ್ಧೇಶ ಸಹಕಾರಿ  ನಿಯಮಿತದ ಅಧ್ಯಕ್ಷ ಲಯನ್‌ ಎ ಸುರೇಶ್‌, ಆತ್ಮಶಕ್ತಿ ವಿವಿದೋದ್ಧೇಶ  ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್‌ ಬೋಳಾರ ಅವರು ಜಯಶ್ರೀ ಅವರಿಗೆ ಶಾಲು ಹೊದಿಸಿ, ಫಲಪುಷ್ಪ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹರೀಶ್‌ ಆಚಾರ್‌, “ತಮ್ಮ 44ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವ ಜಯಶ್ರೀಯವರು ಇತರರಿಗೆ ಮಾದರಿ. ಅವರ ಸಾಧನೆ ಹೆಚ್ಚಿನ ಜನರಿಗೆ ತಲುಪಿ ಅವರಿಗೂ ಪ್ರೇರಣೆಯಾಗಬೇಕು,” ಎಂದರು.  


ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಮಂಗಳೂರು ವಿಶ್ವವಿದ್ಯಾನಿಲಯದ ರೆಡ್‌ಕ್ರಾಸ್‌ ನೋಡಲ್‌ ಅಧಿಕಾರಿ ಡಾ. ಗಣಪತಿ ಗೌಡ ಅವರೂ ಉಪಸ್ಥಿತರಿದ್ದರು. ಐದನೇ ತರಗತಿ ಓದಿದ್ದ ಮಂಗಳೂರಿನ ವೆಲೆನ್ಶಿಯಾ ನಿವಾಸಿಯಾಗಿರುವ ಜಯಶ್ರೀ, ಖಾಸಗಿ ಟ್ಯೂಷನ್‌ ಪಡೆದು ಈ ಬಾರಿ ಎಸ್.ಎಸ್‌.ಎಲ್‌.ಸಿ ಪಾಸಾಗಿದ್ದಾರೆ. 

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 تعليقات

إرسال تعليق

Post a Comment (0)

أحدث أقدم