ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗ್ರಂಥಾಲಯ ಸಂಸ್ಥೆಯ ಜೀವಂತಿಕೆಯಿದ್ದಂತೆ: ಎಂ. ಎನ್‌ ಪ್ರಸಾದ್‌

ಗ್ರಂಥಾಲಯ ಸಂಸ್ಥೆಯ ಜೀವಂತಿಕೆಯಿದ್ದಂತೆ: ಎಂ. ಎನ್‌ ಪ್ರಸಾದ್‌

ವಿವಿ ಕಾಲೇಜಿನಲ್ಲಿ ಗ್ರಂಥಪಾಲಕರ ದಿನಾಚರಣೆಯ ಅಂಗವಾಗಿ ನಡೆದ ವೆಬಿನಾರ್‌


 

ಮಂಗಳೂರು: ಗ್ರಂಥಾಲಯ ಒಂದು ಸಂಸ್ಥೆಯ ಜೀವಂತಿಕೆಯನ್ನು ತೋರಿಸುತ್ತದೆ. ಅದು ಹೃದಯಬಡಿತವಿದ್ದಂತೆ. ಎಂದಿಗೂ ನಿಲ್ಲಲು ಸಾದ್ಯವಿಲ್ಲ, ಎಂದು ಕರ್ನಾಟಕ ರಾಜ್ಯ ಕಾಲೇಜು ಗ್ರಂಥಪಾಲಕರ ಒಕ್ಕೂಟದ (ಕೆಎಸ್‌ಸಿಎಲ್‌ಎ) ಅಧ್ಯಕ್ಷ ಎಂ. ಎನ್‌ ಪ್ರಸಾದ್‌ ಅಭಿಪ್ರಾಯಪಟ್ಟರು. 


ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 130 ನೇ ಗ್ರಂಥಪಾಲಕರ ದಿನಾಚರಣೆಯ ಭಾಗವಾಗಿ ಆಯೋಜಿಸಲಾಗಿದ್ದ ʼಇಂದು ಡಾ. ಎಸ್‌ ಆರ್‌ ರಂಗನಾಥ್‌ ಅವರ ತತ್ವಶಾಸ್ತ್ರದ ಪ್ರಸ್ತುತತೆʼ ಎಂಬ ವೆಬಿನಾರ್‌ನಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಭಾರತದಲ್ಲಿ ನಾಶವಾಗಿದ್ದ ಗ್ರಂಥಾಲಯ ಪರಂಪರೆಯನ್ನು ಸ್ಥಾಪಿಸುವ ಉದ್ದೇಶ  ದೇಶದ ಗ್ರಂಥಾಲಯ ವಿಜ್ಞಾನದ ಪಿತಾಮಹ ಎನಿಸಿಕೊಂಡಿರುವ ಡಾ. ಎಸ್‌ ಆರ್‌ ರಂಗನಾಥ್‌ ಅವರದ್ದಾಗಿತ್ತು. ನಮಗೆ ಸಿಗುವ  ಪ್ರತಿ ಮಾಹಿತಿಗೂ ಅದರದ್ದೇ ಆದ ಮಹತ್ವವಿದೆ. ಹೀಗಾಗಿ ಗ್ರಂಥಾಲಯಗಳು ಸದಾ ಪ್ರಸ್ತುತ, ಎಂದರು.  


ಅದ್ಯಕ್ಷೀಯ ಭಾಷಣ ಮಾಡಿದ ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, “ಡಾ. ಎಸ್‌ ಆರ್‌ ರಂಗನಾಥ್‌ ಅವರು ವಿವಿ ಕಾಲೇಜಿನಲ್ಲಿ 1916 ರಿಂದ 1921 ರವರೆಗೆ ಗಣಿತ ಬೋಧಕರಾಗಿ ಕೆಲಸ ಮಾಡಿರುವುದು ನಮಗೆ ಹೆಮ್ಮೆಯ ವಿಷಯ. ಈ ಎಲೆಕ್ಟ್ರಾನಿಕ್‌ ಯುಗದಲ್ಲೂ ಲೈಬ್ರೆರಿ ಅಗತ್ಯ,” ಎಂದರು. ಇದೇ ವೇಳೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಡಿ ಪಿ.ಹೆಚ್‌ ಡಿ ಪಡೆದ, ನಿವೃತ್ತರಾದ ಸಿಬ್ಬಂದಿ ಮತ್ತು ವಿಶಿಷ್ಠ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. 


ಕಾರ್ಯಕ್ರಮ ನಿರೂಪಿಸಿದ ಬೆಸೆಂಟ್‌ ಸಂಧ್ಯಾ ಕಾಲೇಜಿನ ಹಿರಿಯ ಗ್ರಂಥಪಾಲಕ ಡಾ. ವಾಸಪ್ಪ ಗೌಡ, ಡಾ. ಎಸ್‌ ಆರ್‌ ರಂಗನಾಥ್‌ ಅವರ ಕೊಡುಗೆಯನ್ನು ವಿವರಿಸಿದರು. ತೆಂಕನೆಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಗ್ರಂಥಪಾಲಕ ಡಾ. ರಾಜಶೇಖರ ಕುಂಬಾರ,  ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲಾ ಗ್ರಂಥಪಾಲಕರ ಸಂಘದ ಅಧ್ಯಕ್ಷ ಗಣಪತಿ ಭಟ್‌, ವಿವಿ ಕಾಲೇಜಿನ ಗ್ರಂಥಪಾಲಕಿ ಡಾ. ವನಜಾ, ರೇಖಾ ರೈ, ಪ್ರಭಾವತಿ ಕೆ ಮೊದಲಾದವರು ಕಾರ್ಯಕ್ರಮ ನಡೆಸಿಕೊಟ್ಟರು.  

ಗ್ರಂಥಪಾಲಕರ ದಿನಾಚರಣೆ

ಇದಕ್ಕೂ ಮೊದಲು 75000 ಕ್ಕೂ ಹೆಚ್ಚು ಪುಸ್ತಕಗಳಿರುವ ವಿವಿ ಕಾಲೇಜಿನ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನವನ್ನು ದೀಪ ಬೆಳಗಿಸಿ, ಡಾ. ಎಸ್‌ ಆರ್‌ ರಂಗನಾಥ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನಗೈದು ಆಚರಿಸಲಾಯಿತು. ಪ್ರಾಂಶುಪಾಲೆ ಡಾ. ಅನಸೂಯ ರೈ, ಗ್ರಂಥಪಾಲಕಿ ಡಾ. ವನಜಾ, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಿಬ್ಬಂದಿ ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 تعليقات

إرسال تعليق

Post a Comment (0)

أحدث أقدم