ಮಂಗಳೂರು: ಪತ್ರಕರ್ತ ಧೀರಜ್ ಪೊಯ್ಯಕಂಡ ಅವರ ಎರಡನೇ ಕಾದಂಬರಿ `ಪರಾಶರ' ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಲೋಕಾರ್ಪಣೆಗೊಂಡಿತು.
ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ, ಗುರು ಬೆಳದಿಂಗಳು ಸಂಸ್ಥೆಯ ಅಧ್ಯಕ್ಷ ಪದ್ಮರಾಜ್ ಆರ್. ಅವರು ಕಾದಂಬರಿ ಲೋಕಾರ್ಪಣೆಗೊಳಿಸಿ, ಕಾದಂಬರಿ ಓದುವಿಕೆಯಿಂದ ಜ್ಞಾನ ವೃದ್ಧಿಸುತ್ತದೆ. ಧೀರಜ್ ಅವರು ಅತ್ಯುತ್ತಮ ಬರಹಗಾರರಾಗಿದ್ದು, ಅವರಿಂದ ಇನ್ನೂ ಹೆಚ್ಚಿನ ಕಾದಂಬರಿ ಹೊರಬರಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಹಾಗೂ ಮೈ ಅಂತರಾತ್ಮದ ಸಂಸ್ಥಾಪಕ ವೇಣು ಶರ್ಮಾ ಮಾತನಾಡಿ, ಸಾಹಿತ್ಯ ಸೃಷ್ಟಿಯ ಜೊತೆಗೆ ಓದುಗರವನ್ನು ಸೃಷ್ಟಿಸುವುದು ಈ ಕಾಲದ ಅಗತ್ಯ. ಶೀಘ್ರವೇ ಇವರಿಂದ ಇನ್ನೊಂದು ಥ್ರಿಲ್ಲರ್ ಕಾದಂಬರಿ ಹೊರಬರಲಿದೆ ಎಂದು ಹೇಳಿದರು.
ಲೇಖಕ ಧೀರಜ್ ಪೊಯ್ಯೆಕಂಡ ಮಾತನಾಡಿ, ಸಾಮಾಜಿಕ ಜಾಲತಾಣಗಳ ದುರ್ಬಳಕೆ ಹಾಗೂ ಅದರಿಂದಾಗುವ ದುಷ್ಪರಿಣಾಮದ ಎಳೆಯನ್ನಿಟ್ಟು ಈ ಕ್ರೈಂ, ಸಸ್ಪೆನ್ಸ್ ಕಾದಂಬರಿಯಲ್ಲಿ ಇದೆ. ಪ್ರಸ್ತುತ ಕಾಲಘಟ್ಟದಲ್ಲಿ ಕಾಣಸಿಗುವ ಚಂಚಲ ಸ್ವಭಾವದ ಮಾನವ ಸಂಬಂಧಗಳು, ಸ್ನೇಹ ಹಾಗೂ ಪ್ರೀತಿಯ ವಿವಿಧ ಆಯಾಮಗಳು ಈ ಕಾದಂಬರಿಯಲ್ಲಿದೆ. ಕನ್ನಡ ಲೋಕ ಮತ್ತು ಕನ್ನಡ ಪುಸ್ತಕ ವೆಬ್‌ಸೈಟ್‌ನಲ್ಲಿ ಈ ಕಾದಂಬರಿ ಲಭ್ಯವಿದೆ ಎಂದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق