ಚಿಕ್ಕಮಗಳೂರು: ತರೀಕೆರೆ ಪುರಸಭೆ ಚುನಾವಣೆ ಸೆ.3ರಂದು ನಡೆಯಲಿದೆ.
ಈ ವೇಳೆಯಲ್ಲಿ ತರೀಕೆರೆ ಪಟ್ಟಣ ಹಾಗು ಪಟ್ಟಣದ ಗಡಿಯಿಂದ 3 ಕಿ ಮೀ ದೂರದ ಸ್ಥಳಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಾರ್ವಜನಿಕರು ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆ ಮದ್ಯ ಮಾರಾಟ ಸರಬರಾಜು ನಿಷೇಧ ಮಾಡಲಾಗಿದೆ.
ಸೆ.2 ರಂದು ಬೆಳಿಗ್ಗೆ 7 ಗಂಟೆಯಿಂದ ಸೆ.3 ರ ಮಧ್ಯ ರಾತ್ರಿಯವರೆಗೆ ಮದ್ಯದಂಗಡಿ ಮುಚ್ಚುವಂತೆ ಹಾಗು ಮದ್ಯ, ಬಿಯರ್ ಹಾಗೂ ಮದ್ಯಸಾರ ಇತ್ಯಾದಿ ಅಬಕಾರಿ ಪದಾರ್ಥಗಳ ಸಾಗಾಣಿಕೆ, ಶೇಖರಣೆ, ತಯಾರಿಕೆ, ಸರಬರಾಜು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ರಮೇಶ್ ಆದೇಶ ಹೊರಡಿಸಿದ್ದಾರೆ.
إرسال تعليق