ಹಾಸನ - ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಒಟ್ಟಿಗೆ ಬರೆದ ತಾಯಿ-ಮಗ ಇಬ್ಬರೂ ಉತ್ತೀರ್ಣ ರಾಗಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಸಿ.ಎನ್.ತೀರ್ಥ ಹಾಗೂ ಅವರ ಮಗ ಬಿ.ಆರ್.ಹೇಮಂತ್ ಉತ್ತೀರ್ಣರಾದ ತಾಯಿ ಮಗ.
8 ನೇ ತರಗತಿಯನ್ನು ಅರ್ಧಕ್ಕೆ ನಿಲ್ಲಿಸಿದ್ದ ತೀರ್ಥ ಅವರು ಬಾಳ್ಳುಪೇಟೆ ರಂಗನಾಥ ಪ್ರೌಢಶಾಲೆ ಶಾಲೆಯಲ್ಲಿ ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡಿದ್ದರು.
ವಳಲಹಳ್ಳಿ ಮಲ್ಲೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಬಿ.ಆರ್.ಹೇಮಂತ್ 562 ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾನೆ.
ಅದೇ ರೀತಿ ತಾಯಿಯಾದ ತೀರ್ಥ ಅವರು 235 ಅಂಕ ಪಡೆದು ಪಾಸಾಗಿದ್ದು ವಿಶೇಷವಾಗಿದೆ.
Post a Comment