ಮಲಯಾಳಂನ ಖ್ಯಾತ ನಟಿ ಶರಣ್ಯ ಶಶಿ ಅವರು ತನ್ನ 35ನೇ ವಯಸ್ಸಿಗೆ ಬ್ರೈನ್ ಟ್ಯೂಮರ್ ನಿಂದ ಮೃತಪಟ್ಟಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಬ್ರೈನ್ ಟ್ಯೂಮರ್ನಿಂದ ಬಳಲುತ್ತಿದ್ದ ನಟಿ ಶರಣ್ಯ ಶಶಿ ಅನೇಕ ಬಾರಿ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು. ಇವರ ಸಾವಿಗೆ ಅನೇಕರು ಕಂಬನಿ ಮಿಡಿದಿದ್ದಾರೆ.
2012ರಲ್ಲಿ ಬ್ರೈನ್ ಟ್ಯೂಮರ್ಗೆ ಒಳಗಾಗಿದ್ದ ನಟಿಗೆ ಇಲ್ಲಿಯವರೆಗೆ ಒಟ್ಟು 12 ಶಸ್ತ್ರಚಿಕಿತ್ಸೆಗಳಾಗಿದ್ದವು.
ಕೋವಿಡ್ ಸೋಂಕಿಗೊಳಗಾದ ನಂತರ ಚೇತರಿಸಿಕೊಂಡಿದ್ದ ಅವರಿಗೆ ಮತ್ತೆ ಅನಾರೋಗ್ಯದ ಸಮಸ್ಯೆ ಆರಂಭಗೊಂಡಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
Post a Comment