ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮುಂದಿನ ಶತಮಾನಕ್ಕೆ ಎಚ್ಚರಿಕೆಯ ಮುನ್ನುಡಿ- 'ಕರುಣೆಯಿಲ್ಲದ ಕೊರೋನಾ'

ಮುಂದಿನ ಶತಮಾನಕ್ಕೆ ಎಚ್ಚರಿಕೆಯ ಮುನ್ನುಡಿ- 'ಕರುಣೆಯಿಲ್ಲದ ಕೊರೋನಾ'


ಬೆಂಗಳೂರಿನ ಸ್ನೇಹಾ ಪ್ರಕಾಶನ ಪ್ರಕಟಿಸಿರುವ ಸಾಹಿತಿ ಚಲನಚಿತ್ರ ನಿರ್ದೇಶಕ ಡಾ. ಗುಣವಂತ ಮಂಜುರವರ ನೂತನ ಕೃತಿ ‘ಕರುಣೆಯಿಲ್ಲದ ಕೊರೋನಾ’ ಅತೀ ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ.


ವಿಶ್ವದಾದ್ಯಂತ ಚರ್ಚೆಯಲ್ಲಿರುವ ಮತ್ತು ಜನರನ್ನು ಮಾನಸಿಕವಾಗಿ ಕಾಡುತ್ತಿರುವ ಆಘಾತಕಾರಿ ಸಂಗತಿ ಈ ಕೊರೋನಾ ಎಂಬ ಮಹಾಮಾರಿ. ಕೊರೋನಾ ವೈರಸ್ ಹಬ್ಬಿದ ಸ್ಫೋಟಕ ರೀತಿ ಹಲವು ತಿರುವುಗಳನ್ನು ಪಡೆದು ಜಗತ್ತು ಇನ್ನು ಸ್ತಬ್ಧವಾಯಿತೆಂದು ಭಾವಿಸುವ ಹಾಗೆ ಮಾಡಿತು. ಈಗಾಗಲೇ ಕಂಡಿರುವ ಅನೇಕ ಮಹಾ ಪಿಡುಗುಗಳಿಗಿಂತ ಈ ಜೈವಿಕ ಯುದ್ಧ ಕೋವಿಡ್-19 ವಿಭಿನ್ನವಾಗಿದ್ದು ಜಗತ್ತಿನ ಆರ್ಥಿಕ, ಸಾಮಾಜಿಕ ವ್ಯವಸ್ಥೆಯನ್ನೇ ಅಲುಗಾಡಿಸಿದೆ. ಇಂತಹ ಬದಲಾವಣೆಯ ಕಾಲಘಟ್ಟದಲ್ಲಿ ನಿತ್ಯ ಜೀವನದ ಮೇಲೆ ಉಂಟಾಗುವ ಪರಿಣಾಮ, ಪರಿಹಾರೋಪಾಯಗಳು ಪರಿಸ್ಥಿತಿ ಅವಲೋಕನ ಮುಂತಾದ ವಿಚಾರಗಳನ್ನು ಮನಮುಟ್ಟುವಂತೆ ಕಟ್ಟಿಕೊಡುವ ಸಂಗ್ರಹ ಯೋಗ್ಯ ಕೃತಿ ಇದಾಗಿದೆ ಎಂದು ಪತ್ರಕರ್ತ- ಲೇಖಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.


ಕೋವ್ಯಾಕ್ಸಿನ್ ಮತ್ತು ಕೋವಿಶಿಲ್ಡ್ ಲಸಿಕೆಗಳನ್ನು ದೇಶೀಯ ವಿಜ್ಞಾನಿ ಕಂಡುಹಿಡಿದು ಜಗತ್ತಿಗೆ ಸಂಜೀವಿನಿಯನ್ನು ಭಾರತದ ಪರವಾಗಿ ನೀಡಿದ್ದಾರೆ. 18 ವಿವಿಧ ಆಯಾಮಗಳಲ್ಲಿ ಕೊರೋನಾ ಮೂಲದಿಂದ ಹಿಡಿದು ಲಸಿಕೆಯವರೆಗೆ ವಿಚಾರಗಳನ್ನು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿರುವ ಕೃತಿ ರಚನೆಕಾರ ಡಾ. ಗುಣವಂತ ಮಂಜು ಆಶಯದಂತೆ ಈ ಕೃತಿ ಕೈಸೇರುವ ಹೊತ್ತಿಗೆ ಪರಸ್ಪರ ಕೈ ಕುಲುಕುವ ಪರಸ್ಪರ ಮಾಸ್ಕ್ ಇಲ್ಲದೆ ಮಾತನಾಡುವ ದಿನಗಳು ಬರಲಿ ಎಂಬುದಾಗಿದೆ.

ವಿವರಗಳಿಗೆ: 9448260417


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post