ಘಟಪ್ರಭಾ : ಬೈಕ್ ಮತ್ತು ಗ್ಯಾಸ್ ಸಿಲಿಂಡರ್ ಸಾಗಣೆಯ ವಾಹನದ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಮಹಿಳೆ ಮೃತಪಟ್ಟಿದ್ದು, ಬೈಕ್ ಸವಾರನಿಗೆ ಗಂಭೀರ ಗಾಯಗಳಾದ ಘಟನೆಯೊಂದು ಸಂಗನಕೇರಿ ಹತ್ತಿರ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಹಿಡಕಲ್ ದಿಂದ ಗೋಕಾಕ್ ಕಡೆಗೆ ಬೈಕ್ ಮೇಲೆ ತಂದೆ ಮತ್ತು ಮಗಳು ಹೋಗುತ್ತಿರುವಾಗ ಸಿಲಿಂಡರ್ ತುಂಬಿದ ವಾಹನ ಓವರ್ ಟೇಕ್ ಮಾಡುವ ವೇಳೆಯಲ್ಲಿ ಬೈಕ್ ಹ್ಯಾಂಡಲಿಗೆ ತಾಗಿದ ಪರಿಣಾಮ ಸವಾರರು ಕೆಳಗೆ ಬಿದ್ದುದ್ದರಿಂದ ಗಂಭೀರವಾದ ಗಾಯಗಳಾಗಿವೆ.
ಗಾಯಾಳುಗಳನ್ನು ಗೋಕಾಕ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಮಹಿಳೆ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಶಾಮಲಾ ಸುರೇಶ ಶಿವಾಪೂರ ಸಾವನ್ನಪ್ಪಿದ ದುರ್ದೈವಿ.
ಬೈಕ್ ಸವಾರರಾದ ಸಿದ್ದಪ್ಪ ಪುಂಡಲೀಕ ಮನ್ನಿಕೇರಿ ಗಾಯಗಳಾಗಿದ್ದು, ಇನ್ನೂ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ಈ ಬಗ್ಗೆ ಘಟನಾ ಸ್ದಳಕ್ಕೆ ಘಟಪ್ರಭಾ ಪೊಲೀಸರು ಭೇಟಿ ನೀಡಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
إرسال تعليق