ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಾನಂಗಳದಲಿ ನಲಿವ ತ್ರಿವರ್ಣ ಧ್ವಜ

ಬಾನಂಗಳದಲಿ ನಲಿವ ತ್ರಿವರ್ಣ ಧ್ವಜ

 


ನೋಡು ನೋಡು ನೋಡು ನೋಡು ನೋಡಲ್ಲಿ ನೀನು

ನೋಡು ನೋಡು ನೋಡು ನೋಡು ನೋಡಲ್ಲಿ ನೀನು

ಬಾನಂಗಳ ತೇರಲ್ಲಿ ರಂಗಿನ ಓಕುಳಿ

ಜನಮನದ ಹೃದಯದಲಿ ಹರುಷದ ಗಾನಾವಳಿ

ಬಾನಂಗಳ ತೇರಲ್ಲಿ ರಂಗಿನ ಓಕುಳಿ

ಜನಮನದ ಹೃದಯದಲಿ ಹರುಷದ ಗಾನಾವಳಿ

ನೋಡು ನೋಡು ನೋಡು ನೋಡು ನೋಡಲ್ಲಿ ನೀನು


ವೇಷಭಾಷೆ ಬೇರೆ ಬೇರೆ ಜಾತಿಮತವು ಬೇರೆ ಬೇರೆ

ಆದರಿಲ್ಲಿ ಬಾಳಬೇಕು ಒಂದೇ ತಾಯ ಮಕ್ಕಳಂತೆ

ಭಾರತಾಂಬೆಯ ಮಡಿಲೆ ನಮಗೆ ಜನ್ಮಭೂಮಿಯು

ನೋಡು ನೋಡು ನೋಡು ನೋಡು ನೋಡಲ್ಲಿ ನೀನು

ಬಾನಂಗಳ ತೇರಲ್ಲಿ ರಂಗಿನ ಓಕುಳಿ

ಜನಮನದ ಹೃದಯದಲಿ ಹರುಷದ ಗಾನಾವಳಿ


ಶತ ಶತಮಾನದ ಕಣ್ಣೀರ ಕೋಡಿಯಿದು

ಶತಕೋಟಿ ವೀರರ ಬಲಿದಾನದ ಫಲವಿದು

ಮತ್ತೆ ಕೈಜಾರದಿರಲಿ ಜಾರಿ ಮರುಗದಂತಿರಲಿ

ನೋಡು ನೋಡು ನೋಡು ನೋಡು ನೋಡಲ್ಲಿ ನೀನು

ಬಾನಂಗಳ ತೇರಲ್ಲಿ ರಂಗಿನ ಓಕುಳಿ

ಜನಮನದ ಹೃದಯದಲಿ ಹರುಷದ ಗಾನಾವಳಿ



ಭಾರತಾಂಬೆ ಕಣ್ಣ ತುಂಬಾ ಹೊನ್ನ ಕಳೆಯು ತುಂಬಿದೆ

ತನ್ನ ರಕ್ಷೆ ಮಾಡಿ ಮಡಿದವರ ರಕ್ತ ಹಣೆಯ ತುಂಬಾ ಹಬ್ಬಿದೆ

ತನ್ನ ಉಳಿಸಿ ಮರಳಿದವರ ಮತ್ತೆ ಮತ್ತೆ ನೆನೆಯುತ್ತಿರುವಳು

ನೋಡು ನೋಡು ನೋಡು ನೋಡು ನೋಡಲ್ಲಿ ನೀನು

ಬಾನಂಗಳ ತೇರಲ್ಲಿ ರಂಗಿನ ಓಕುಳಿ

ಜನಮನದ ಹೃದಯದಲಿ ಹರುಷದ ಗಾನಾವಳಿ


ಹಳ್ಳಿ ಗಲ್ಲಿ ದಿಲ್ಲಿಯಲ್ಲಿ ನಲಿದು ಮೆರೆದ ತ್ರಿವರ್ಣ ಧ್ವಜ

ಕ್ಷಣ ಕ್ಷಣಕ್ಕೂ ಎಚ್ಚರಿಸಿದೆ ಬಲಿದಾನದ ದಿನವನು

ದಾಸ್ಯದ ಸರಪಳಿಯನು ಕಡಿದು ಬಂದ ಧ್ವಜವಿದು

ನೋಡು ನೋಡು ನೋಡು ನೋಡು ನೋಡಲ್ಲಿ ನೀನು

ಬಾನಂಗಳ ತೇರಲ್ಲಿ ರಂಗಿನ ಓಕುಳಿ

ಜನಮನದ ಹೃದಯದಲಿ ಹರುಷದ ಗಾನಾವಳಿ


ಕೃಷ್ಣಪ್ರಿಯ✍️

0 Comments

Post a Comment

Post a Comment (0)

Previous Post Next Post