ನೋಡು ನೋಡು ನೋಡು ನೋಡು ನೋಡಲ್ಲಿ ನೀನು
ನೋಡು ನೋಡು ನೋಡು ನೋಡು ನೋಡಲ್ಲಿ ನೀನು
ಬಾನಂಗಳ ತೇರಲ್ಲಿ ರಂಗಿನ ಓಕುಳಿ
ಜನಮನದ ಹೃದಯದಲಿ ಹರುಷದ ಗಾನಾವಳಿ
ಬಾನಂಗಳ ತೇರಲ್ಲಿ ರಂಗಿನ ಓಕುಳಿ
ಜನಮನದ ಹೃದಯದಲಿ ಹರುಷದ ಗಾನಾವಳಿ
ನೋಡು ನೋಡು ನೋಡು ನೋಡು ನೋಡಲ್ಲಿ ನೀನು
ವೇಷಭಾಷೆ ಬೇರೆ ಬೇರೆ ಜಾತಿಮತವು ಬೇರೆ ಬೇರೆ
ಆದರಿಲ್ಲಿ ಬಾಳಬೇಕು ಒಂದೇ ತಾಯ ಮಕ್ಕಳಂತೆ
ಭಾರತಾಂಬೆಯ ಮಡಿಲೆ ನಮಗೆ ಜನ್ಮಭೂಮಿಯು
ನೋಡು ನೋಡು ನೋಡು ನೋಡು ನೋಡಲ್ಲಿ ನೀನು
ಬಾನಂಗಳ ತೇರಲ್ಲಿ ರಂಗಿನ ಓಕುಳಿ
ಜನಮನದ ಹೃದಯದಲಿ ಹರುಷದ ಗಾನಾವಳಿ
ಶತ ಶತಮಾನದ ಕಣ್ಣೀರ ಕೋಡಿಯಿದು
ಶತಕೋಟಿ ವೀರರ ಬಲಿದಾನದ ಫಲವಿದು
ಮತ್ತೆ ಕೈಜಾರದಿರಲಿ ಜಾರಿ ಮರುಗದಂತಿರಲಿ
ನೋಡು ನೋಡು ನೋಡು ನೋಡು ನೋಡಲ್ಲಿ ನೀನು
ಬಾನಂಗಳ ತೇರಲ್ಲಿ ರಂಗಿನ ಓಕುಳಿ
ಜನಮನದ ಹೃದಯದಲಿ ಹರುಷದ ಗಾನಾವಳಿ
ಭಾರತಾಂಬೆ ಕಣ್ಣ ತುಂಬಾ ಹೊನ್ನ ಕಳೆಯು ತುಂಬಿದೆ
ತನ್ನ ರಕ್ಷೆ ಮಾಡಿ ಮಡಿದವರ ರಕ್ತ ಹಣೆಯ ತುಂಬಾ ಹಬ್ಬಿದೆ
ತನ್ನ ಉಳಿಸಿ ಮರಳಿದವರ ಮತ್ತೆ ಮತ್ತೆ ನೆನೆಯುತ್ತಿರುವಳು
ನೋಡು ನೋಡು ನೋಡು ನೋಡು ನೋಡಲ್ಲಿ ನೀನು
ಬಾನಂಗಳ ತೇರಲ್ಲಿ ರಂಗಿನ ಓಕುಳಿ
ಜನಮನದ ಹೃದಯದಲಿ ಹರುಷದ ಗಾನಾವಳಿ
ಹಳ್ಳಿ ಗಲ್ಲಿ ದಿಲ್ಲಿಯಲ್ಲಿ ನಲಿದು ಮೆರೆದ ತ್ರಿವರ್ಣ ಧ್ವಜ
ಕ್ಷಣ ಕ್ಷಣಕ್ಕೂ ಎಚ್ಚರಿಸಿದೆ ಬಲಿದಾನದ ದಿನವನು
ದಾಸ್ಯದ ಸರಪಳಿಯನು ಕಡಿದು ಬಂದ ಧ್ವಜವಿದು
ನೋಡು ನೋಡು ನೋಡು ನೋಡು ನೋಡಲ್ಲಿ ನೀನು
ಬಾನಂಗಳ ತೇರಲ್ಲಿ ರಂಗಿನ ಓಕುಳಿ
ಜನಮನದ ಹೃದಯದಲಿ ಹರುಷದ ಗಾನಾವಳಿ
ಕೃಷ್ಣಪ್ರಿಯ✍️
إرسال تعليق