ಮಂಗಳೂರು: ನವಭಾರತ ರಾತ್ರಿ ಪ್ರೌಢಶಾಲೆಯ ಸಭಾಭವನದಲ್ಲಿ 75ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮಿಸಿ ಆಚರಿಸಲಾಯಿತು. ನವಭಾರತ ಎಜ್ಯುಕೇಶನ್ ಸೊಸೈಟಿಯ ಖಜಾಂಚಿಯಾದ ಮಧುಸೂದನ ಆಯರ್ ರವರು ಧ್ವಜಾರೋಹಣಗೈದು ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನದ ಸಂದೇಶವನ್ನು ನೀಡಿದರು.
ರಾಷ್ಟ್ರಭಕ್ತಿ, ಸ್ವಾತಂತ್ರ್ಯಕ್ಕಾಗಿ ಮಡಿದ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ನೆನಪಿಸಿಕೊಂಡರು. ಶಾಲಾ ಕಾರ್ಯದರ್ಶಿಗಳಾದ ಎಮ್. ರಾಮಚಂದ್ರ, ಉಪಾಧ್ಯಕ್ಷ ಫಕ್ರುದ್ದೀನ್ ಆಲಿ, ಜೊತೆ ಕಾರ್ಯದರ್ಶಿ ಆನಂದ ಸುವರ್ಣ ಹಾಗೂ ಸದಸ್ಯರಾದ ಜಯಧರ್ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರವಿ ಅಲೆವೂರಾಯ ವರ್ಕಾಡಿ ಸ್ವಾಗತಿಸಿದರು. ಅಧ್ಯಾಪಕ ಶ್ರೀ ಮಾಧವ ನಾವಡ ವರ್ಕಾಡಿ ಧನ್ಯವಾದ ಅರ್ಪಿಸಿದರು. ಅಧ್ಯಾಪಕರಾದ ಶ್ರೀಮತಿ ರವಿತಾ ನಾಯಕ್, ಶ್ರೀ ದಿನೇಶ್ ಕುಮಾರ್ ಹಾಗೂ ಶ್ರೀ ಬಾಲಕೃಷ್ಣ ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment