ಬೆಂಗಳೂರು ; ಕನ್ನಡ ಸಿನಿಮಾರಂಗದ ಹಿರಿಯ ನಟಿ, ರಾಜಕಾರಣಿ ಶ್ರುತಿ ಕರ್ನಾಟಕ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾಗಿ ನೇಮಕ ಆದ ಸಂಧರ್ಭದಲ್ಲಿ ಧರ್ಮಸ್ಥಳದ ಶ್ರೀ ಮಂಜುನಾಥನ ದರ್ಶನ ಪಡೆದರು.
ನಟಿ ಶ್ರುತಿ ಹಾಗೂ ತನ್ನ ಮಗಳು ಗೌರಿ ಜೊತೆ ಧರ್ಮಸ್ಥಳಕ್ಕೆ ಭೇಟಿ ನೀಡಿ, ತಾಯಿ ಮಗಳು ಇಬ್ಬರೂ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಮಾಡಿ ಸಂತಸ ಪಟ್ಟರು.
ಇಬ್ಬರೂ ಧರ್ಮಸ್ಥಳ ದೇವಾಲಯಕ್ಕೆ ಭೇಟಿ ನೀಡಿದ ಕ್ಷಣದ ಫೋಟೋವನ್ನು ನಟಿ ಶ್ರುತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
إرسال تعليق