ಕಾಸರಗೋಡು: ಕಾಸರಗೋಡು ತಳಂಗರೆ ಸಮೀಪದ ಕಸಬಾ ಕಡಪ್ಪುರ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ರವಿವಾರ ಬೆಳಿಗ್ಗೆ ಮಗುಚಿ ಬಿದ್ದ ಪರಿಣಾಮ ನಾಪತ್ತೆಯಾಗಿದ್ದ ಮೂವರ ಶವ ಪತ್ತೆಯಾಗಿದೆ.
ನಾಪತ್ತೆಯಾಗಿದ್ದ ಕಡಪ್ಪುರ ನಿವಾಸಿಗಳಾದ ಸಂದೀಪ್ (33 ವ), ರತೀಶನ್ (30 ವ) ಮತ್ತು ಕಾರ್ತಿಕ್ (29 ವ) ಅವರ ಶವ ಬೇಕಲ ಕೋಟೆಯ ಬಳಿ ಪತ್ತೆಯಾಗಿದೆ.
ರವಿವಾರ ಬೆಳಿಗ್ಗೆ ಕಾಸರಗೋಡು ಕಸಬಾ ಕಡಪ್ಪುರದಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿ ಅಳಿವೆ ಬಾಗಿಲಿನಲ್ಲಿ ಮಗುಚಿ ಬಿದ್ದಿದ್ದು, ಈ ವೇಳೆಯಲ್ಲಿ ಮೂವರು ನಾಪತ್ತೆಯಾಗಿದ್ದು, ನಾಲ್ವರು ಈಜಿ ದಡ ಸೇರಿ ಪಾರಾಗಿದ್ದರು.
ಸಮುದ್ರದಲ್ಲಿ ಪ್ರಬಲವಾದ ಗಾಳಿ ಬೀಸಿದ್ದರಿಂದ ನಿಯಂತ್ರಣ ತಪ್ಪಿ ದೋಣಿ ಮಗುಚಿ ಬಿದ್ದಿದೆ ಎಂದು ಎನ್ನಲಾಗಿದೆ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق