ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪಡು ಹೊಸಮನೆಯ ಹಡೀಲು ಭೂಮಿಯಲ್ಲಿ ಕೃಷಿಕಾರ್ಯದಲ್ಲಿ ಡಾ.ಭರತ್ ಶೆಟ್ಟಿ

ಪಡು ಹೊಸಮನೆಯ ಹಡೀಲು ಭೂಮಿಯಲ್ಲಿ ಕೃಷಿಕಾರ್ಯದಲ್ಲಿ ಡಾ.ಭರತ್ ಶೆಟ್ಟಿ



ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಬೊಂಡಂತಿಲ ಗ್ರಾಮದ ಪಡು ಹೊಸಮನೆಯ ಹಡೀಲು ಭೂಮಿಯಲ್ಲಿ ಕೃಷಿ ಕಾರ್ಯ ನಡೆಯುತ್ತಿರುವಾಗ ಅಲ್ಲಿ ಆಗಮಿಸಿದ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಸ್ವತ: ಟ್ರಾಕ್ಟರ್ ಚಲಾಯಿಸಿ, ಭತ್ತ ಕೃಷಿಯ ವಿವಿಧ ಕಾರ್ಯಗಳಲ್ಲಿ ಕೃಷಿಕರೊಂದಿಗೆ ಪಾಲ್ಗೊಂಡು ಸ್ಥಳೀಯರಲ್ಲಿ ಉತ್ಸಾಹ ವಾತಾವರಣವನ್ನು ಸೃಷ್ಟಿಸಿದರು.


ತಮ್ಮ ವಿಧಾನಸಭಾ ಕ್ಷೇತ್ರದಲ್ಲಿರುವ ಹಡೀಲು ಭೂಮಿಗಳಲ್ಲಿ ಕೃಷಿ ಕಾರ್ಯ ನಡೆಸಲು ಸ್ಥಳೀಯರಲ್ಲಿ ಸ್ಫೂರ್ತಿ ತುಂಬುತ್ತಿರುವ ಶಾಸಕ ಡಾ.ಭರತ್ ಶೆಟ್ಟಿಯವರ ಈ ನಡೆ ಕೃಷಿಬಂಧುಗಳಲ್ಲಿ ಹುಮ್ಮಸ್ಸನ್ನು ಉಂಟು ಮಾಡಿದೆ.  


A.P.M.C ಸದಸ್ಯರಾದ ಬೊಂಡಂತಿಲ  ಪಡು ಹೊಸಮನೆಯ ವಾಣಿ ಆರ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ  ಕಾರ್ಯಕ್ರಮದಲ್ಲಿ ಪಡು ಹೊಸ ಮನೆಯ ಹಿರಿಯರಾದ ಜಯರಾಮ ರೈ, ಪ್ರಗತಿಪರ ಕೃಷಿಕರಾದ ಗೋಪಾಲ ಕೃಷ್ಣ ಭಂಡಾರಿ, ಭಾಜಪಾ ವಕ್ತಾರ ಜಗದೀಶ್ ಶೇಣವ, ಉತ್ತರ ಮಂಡಲ ರೈತ ಮೋರ್ಚಾ ಅಧ್ಯಕ್ಷರಾದ ಪ್ರಕಾಶ್ ಆಳ್ವ,ರೈತ ಮೋರ್ಚಾದ ಕೋಶಾಧಿಕಾರಿಗಳಾದ ನಾಗೇಶ್ ಕಾಪೆಟ್ಟು ,ಪಂಚಾಯತ್ ಸದಸ್ಯರುಗಳಾದ ಕಿಶೋರ್ ಕುಮಾರ್ ಉಗ್ಗಕೊಡಿ,ಶ್ರೀಧರ್ ಚಿಕ್ಕ ಬೆಟ್ಟು, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಗೋಕುಲ್ ದಾಸ್ ಶೆಟ್ಟಿ, ಮಹಾಶಕ್ತಿ ಕೇಂದ್ರದ  ಅಧ್ಯಕ್ಷರಾದ ಸಚಿನ್ ಹೆಗ್ಡೆ ಹಾಗೂ ಪ್ರಧಾನ ಕಾರ್ಯದರ್ಶಿ ದಿನೇಶ್ ತಲ್ಲಿಮಾರು, ನೀರು ಮಾರ್ಗ ಮಹಾಶಕ್ತಿ ಕೇಂದ್ರದ  ಹರಿಕೇಶ್ ಶೆಟ್ಟಿ, ಉಳೈಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ತಿಲಕ್ ಕೋರೆಟ್ಟು ಕುಂಜಣ್ಣ ಶೆಟ್ಟಿ ಕೋರೆಟ್ಟುಗುತ್ತು, ಶಕ್ತಿಕೇಂದ್ರ ಪ್ರಮುಖರಾದ ಯಶ್ವಿನ್ ಎನ್ ಕುಂದರ್ ಮೋರ್ಚಾಗಳ ಪ್ರಮುಖರು ಬೂತ್ ಅಧ್ಯಕ್ಷರು ಮತ್ತು ಇತರರು ಉಪಸ್ಥಿತರಿದ್ದರು.



0 تعليقات

إرسال تعليق

Post a Comment (0)

أحدث أقدم