ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯಶಸ್ಸಿನ ಮೆಟ್ಟಿಲಿಗೆ ಸತತ ಪ್ರಯತ್ನ ಅತ್ಯಗತ್ಯ: ಡಾ. ಶರ್ಮಾ

ಯಶಸ್ಸಿನ ಮೆಟ್ಟಿಲಿಗೆ ಸತತ ಪ್ರಯತ್ನ ಅತ್ಯಗತ್ಯ: ಡಾ. ಶರ್ಮಾ


ಪುತ್ತೂರು: ಕಲಿಕೆ ಎನ್ನುವುದು ನಿಂತ ನೀರಲ್ಲ, ಅದೊಂದು ನಿರಂತರ ಪ್ರಕ್ರಿಯೆ. ಕಲಿಕೆಯಲ್ಲಿ ಬರವಣಿಗೆ ಪ್ರಮುಖ ಪಾತ್ರ ವಹಿಸುತ್ತದೆ. ಸತತ ಪ್ರಯತ್ನದಿಂದ ಮಾತ್ರ ಉತ್ತಮ ಬರವಣಿಗೆ ಹೊರಹೊಮ್ಮಲು ಸಾಧ್ಯ ಎಂದು ತುಮಕೂರು ವಿಶ್ವವಿದ್ಯಾನಿಲಯದ ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸುಬ್ರಹ್ಮಣ್ಯ ಶರ್ಮಾ ವಿ ಹೇಳಿದರು.


ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಆಂಗ್ಲ ವಿಭಾಗದ ಆಶ್ರಯದಲ್ಲಿ ನಡೆದ ಬರವಣಿಗೆ ಕೌಶಲ್ಯ ಎಂಬ ವಿಷಯದ ಕುರಿತು ನಡೆದ ವರ್ಚುವಲ್ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.


ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸುವಾಗ ಆ ಉತ್ತರ ಇನ್ವಿಜಿಲೇಟರ್ಗೆ ತೃಪ್ತಿ ತರುವಂತಿರಬೇಕು. ಉತ್ತರ ಪತ್ರಿಕೆಗಳಲ್ಲಿನ ವಿಷಯಗಳು ಶಿಸ್ತುಬದ್ಧವಾಗಿರಬೇಕು. ವಿದ್ಯಾರ್ಥಿಗಳು ಪುಟ ತುಂಬಿಸುವತ್ತ ಮಾತ್ರ ಗಮನ ಹರಿಸದೆ ಗುಣಮಟ್ಟದ ಉತ್ತರ ನೀಡುವಲ್ಲೂ ಸಮರ್ಥರಾಗಿರಬೇಕು. ಇವೆಲ್ಲದರ ಜೊತೆಗೆ ಭಾಷಾ ಸ್ಪಷ್ಟತೆ ತಾವು ಬರೆಯುವ ಉತ್ತರಗಳಲ್ಲಿ ಅಡಕವಾಗಿರಬೇಕು ಎಂದು ಎಂದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಎಚ್ ಮಾತನಾಡಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಪ್ರೊ.ವಿಷ್ಣು ಗಣಪತಿ ಭಟ್, ವಿದ್ಯಾರ್ಥಿಗಳು ಇಂತಹ ಕಾರ್ಯಾಕ್ರಮದಲ್ಲಿ ಪಾಲ್ಗೊಂಡು ಅವಕಾಶದ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.


ಈ ಸಂದರ್ಭ ಸಂಪನ್ಮೂಲ ವ್ಯಕ್ತಿ ಡಾ.ಸುಬ್ರಹ್ಮಣ್ಯ ಶರ್ಮಾ ವಿ ಮತ್ತು ವಿದ್ಯಾರ್ಥಿಗಳ ನಡುವೆ ಸಂವಾದ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದಲ್ಲಿ ಕಾಲೇಜಿನ ಐ.ಕ್ಯೂ. ಎ. ಸಿ ಘಟಕದ ಸಂಯೋಜಕ ಶಿವಪ್ರಸಾದ್, ವಿಭಾಗದ ಉಪನ್ಯಾಸಕಿಯರಾದ ರೇಖಾ ನಾಯರ್, ಅಂಬಿಕಾ ಎನ್.ಆರ್, ಸರಸ್ವತಿ ಸಿ.ಕೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಭಾಗ್ಯಲಕ್ಶ್ಮಿ ಪ್ರಾರ್ಥಿಸಿ ಹರ್ಷಿತಾ ನಾಯಕ್ ಸ್ವಾಗತಿಸಿದರು. ವಿದ್ಯಾರ್ಥಿ ಕಾರ್ತಿಕ್ ಪೈ ವಂದಿಸಿ ವಿದ್ಯಾರ್ಥಿನಿ ಆಶಿತಾ ಎಂ ಕಾರ್ಯಕ್ರಮ ನಿರೂಪಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم