ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನ ಖಂಡಿಗೆ- ಚಾಕಟೆ ಎಂಬಲ್ಲಿ ನೂತನವಾಗಿ ಸ್ಥಾಪಿಸಿದ ವಿದ್ಯುತ್ ಟ್ರಾನ್ಸ್ ಫರ್ಮರ್ ನ ಉದ್ಘಾಟನೆಯು ಕೋವಿಡ್ 19 ಮಾನದಂಡ ಪಾಲಿಸಿಕೊಂಡು ಜರಗಿತು. ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಟ್ರಾನ್ಸ್ ಫರ್ಮರ್ ನ್ನು ಉದ್ಘಾಟಿಸಿದರು.
ಎಣ್ಮಕಜೆ ಗ್ರಾಮ ಪಂಚಾಯತು ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಹಾಗೂ ವಾರ್ಡ್ ಸದಸ್ಯೆ ಸೌದಾಭಿ ಹನೀಫ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಬ್ಲಾಕ್ ಪಂ.ಸದಸ್ಯ ರಾಮಕೃಷ್ಣ ರೈ ಕುದ್ವ, ಕೆಎಸ್ ಇಬಿಯ ಬಾಬು, ಎ.ಇ.ಸತೀಶ್, ಸಬ್ ಇಂಜಿನಿಯರ್ ರಝಾಕ್, ಉಸ್ತುವಾರಿ ಸುಂದರ ಹಾಗೂ ಸಿಬ್ಬಂದಿಗಳು ಲ್ಪಾಗೊಂಡಿದ್ದರು. ಆಶ್ರಫ್ ಬಜಕೂಡ್ಲು ಸ್ವಾಗತಿಸಿ ಹನೀಫ್ ನಡುಬೈಲ್ ವಂದಿಸಿದರು.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق