ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಮಲಿ ಧಾರವಾಹಿ ನಟಿಯೊಬ್ಬರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಸುದ್ದಿ ಸದ್ದು ಮಾಡುತ್ತಿದೆ.
ಕಮಲಿ ಧಾರವಾಹಿಯಲ್ಲಿ ನಾಯಕಿಯ ಗೆಳತಿಯಾಗಿ ಪಾತ್ರ ಮಾಡುತ್ತಿರುವ ‘ನಿಂಗಿ’ ಎಲ್ಲರಿಗೂ ತಿಳಿದೆ ಇದೆ. ತಿಂಡಿ ಪೋತಿಯಾಗಿ ,ಕಾಮಿಡಿ ಇರುವ ಪಾತ್ರದಲ್ಲಿ ನಟನೆ ಮಾಡುತ್ತಿರುವ ನಟಿ ಅಂಕಿತಾ ರಿಯಲ್ ಲೈಫ್ ನಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಛಾಯಾಗ್ರಾಹಕ ಸುಹಾಸ್ ಅವರ ಜೊತೆಗೆ ಅಂಕಿತಾ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸದ್ಯದಲ್ಲೇ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.
إرسال تعليق