ಬೆಂಗಳೂರು: ವರನಟ ಡಾ. ರಾಜ್ ಕುಮಾರ್ ಹುಟ್ಟೂರು ಗಾಜನೂರಿನಲ್ಲಿ ಈಗ ಅವರ ಪುತ್ರರಾದ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಸಂಸಾರ ಸಮೇತ ಸಮಯ ಕಳೆಯುತ್ತಿದ್ದಾರೆ.
ಗಾಜನೂರಿಗೆ ಕುಟುಂಬ ಸಮೇತರಾಗಿ ತೆರಳಿರುವ ಡಾ. ರಾಜ್ ಪುತ್ರರು ಇಲ್ಲಿನ ಪ್ರಕೃತಿ ಸೌಂದರ್ಯ ಸವಿದು ಖುಷಿಪಟ್ಟಿದ್ದಾರೆ. ಜೊತೆಯಲ್ಲಿ ಸ್ಥಳೀಯರೊಂದಿಗೆ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಶಿವಣ್ಣ, ಅಪ್ಪಾಜಿ ಹುಟ್ಟಿದ ಊರು, ನನಗೆ ಹತ್ತಿರವಾದ ಗಾಜನೂರಿನಲ್ಲಿ ನಾನು, ನನ್ನ ಕುಟುಂಬ ಕಳೆದ ಕ್ಷಣಗಳು ಎಂದು ಫೋಟೋ ಸಮೇತ ಪ್ರಕಟಿಸಿದ್ದಾರೆ.
إرسال تعليق