ಬೆಂಗಳೂರು: ಕೋವಿಡ್ ಲಾಕ್ಡೌನ್ ನಿಂದ ಕಂಗಾಲಾಗಿದ್ದ ಆಟೋ ಚಾಲಕರು ಇದೀಗ ಮತ್ತೊಂದು ಶಾಕ್ ನೀಡಿದೆ. ಆಟೋ ಎಲ್ ಪಿ ಜಿ ಗ್ಯಾಸ್ ದರದಲ್ಲಿ ಮತ್ತೆ ಏರಿಕೆ ಮಾಡಲಾಗಿದೆ.
ಆಟೋ ಎಲ್ ಪಿ ಜಿ ಗ್ಯಾಸ್ ದರದಲ್ಲಿ ಒಂದು ಲೀಟರ್ ಗೆ 5 ರೂಪಾಯಿ 41 ಪೈಸೆ ಏರಿಕೆಯಾಗಿದೆ. 50 ರೂಪಾಯಿ 47 ಪೈಸೆ ಇದ್ದ ಆಟೋ ಗ್ಯಾಸ್ ಬೆಲೆ ಇದೀಗ 55 ರೂಪಾಯಿ 88 ಪೈಸೆಗೆ ಏರಿಕೆಯಾಗಿದೆ.
ಏಕಾಏಕಿ ಆಟೋ ಗ್ಯಾಸ್ ದರದಲ್ಲಿ ಏರಿಕೆ ಮಾಡಿರುವುದು ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.
إرسال تعليق