ನವದೆಹಲಿ: ರಾಮ್ಸೆ ಬ್ರದರ್ಸ್ ನ ಕುಮಾರ್ ರಾಮ್ಸೆ ಅವರು 85 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ರಾಮ್ಸೆ ಬ್ರದರ್ಸ್ ಭಾರತೀಯ ಸಿನೆಮಾದಲ್ಲಿ ಬೃಹತ್ ಸಾಮ್ರಾಜ್ಯವನ್ನು ಸ್ಥಾಪಿಸಿದರು. ರಾಮ್ಸೆ ಬ್ರದರ್ಸ್ ನ ಹಿರಿಯ ಕುಮಾರ್ ರಾಮ್ಸೆ ಜುಲೈ 8ರಂದು ನಿಧನರಾದರು.
ಕುಮಾರ್ ಅವರು ಮುಂಬೈನ ಹಿರಾನಂಡನಿ ಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು ಎಂದು ಅವರ ಹಿರಿಯ ಮಗ ಗೋಪಾಲ್ ಅವರು ಪಿ.ಟಿ.ಐ.ಗೆ ತಿಳಿಸಿದರು.
ಇಂದು ಬೆಳಿಗ್ಗೆ 5:30ರ ಸುಮಾರಿಗೆ ಅವರು ಹೃದಯ ಸ್ತಂಭನದಿಂದಾಗಿ ನಿಧನರಾದರು.
ಕುಮಾರ್ ಅವರು ಪತ್ನಿ ನೀಲಾ ಮತ್ತು ರಾಜ್, ಗೋಪಾಲ್ ಮತ್ತು ಸುನಿಲ್ ಎಂಬ ಮೂವರು ಪುತ್ರರನ್ನು ಅಗಲಿದ್ದಾರೆ.
Post a Comment