ಸುರತ್ಕಲ್: ಮೋಜಿಗಾಗಿ ಸಿನಿಮೀಯ ಶೈಲಿಯಲ್ಲಿ ಸಮುದ್ರ ಕಿನಾರೆಯಲ್ಲಿ ಕಾರು ಚಲಾಯಿಸಲು ಹೋಗಿ ಬೆಂಗಳೂರಿನ ಯುವಕರ ತಂಡವೊಂದು ಇಕ್ಕಟ್ಟಿಗೆ ಸಿಲುಕಿಕೊಂಡ ಘಟನೆಯೊಂದು ಸುರತ್ಕಲ್ ಗುಡ್ಡೆಕೊಪ್ಲ ಸಮುದ್ರ ಕಿನಾರೆಯಲ್ಲಿ ನಡೆದಿದೆ.
ಸುರತ್ಕಲ್ ಗುಡ್ಡೆಕೊಪ್ಲ ಸಮುದ್ರ ಕಿನಾರೆಯಲ್ಲಿ ಕಾರು ಚಲಾಯಿಸಿಕೊಂಡು ಕೆಟ್ಟು ನಿಂತ ಡ್ರಜ್ಜರ್ ಬಳಿ ಹೋಗುವ ಯೋಜನೆ ಬೆಂಗಳೂರಿನ ಯುವಕರ ತಂಡದಾಗಿತ್ತು. ಆದರೆ ಆ ಕಡೆಗೆ ತೆರಳುತ್ತಿದ್ದಂತೆ ಕಾರು ಸಮುದ್ರದ ಮರಳಿನಲ್ಲಿ ಹೂತು ಹೋಗಿದೆ.
ಸಮುದ್ರ ಉಬ್ಬರ ಆರಂಭವಾಗಿ ಕಾರಿಗೆ ತೆರೆ ಅಪ್ಪಳಿಸುತ್ತಿದ್ದಂತೆ ಕಾರು ಕೊಚ್ಚಿಕೊಂಡು ಹೋಗುವ ಸಂಭವ ಎದುರಾಯಿತು. ಈ ವೇಳೆಯಲ್ಲಿ ಯುವಕರ ತಂಡಕ್ಕೆ ಭಯ ಹುಟ್ಟಿತು. ಹಾಗಾಗಿ ಕಾರನ್ನು ಮೇಲೆತ್ತಲು ಕ್ರೇನ್ ತರಿಸುವ ಪ್ರಯತ್ನ ಮಾಡಿದರು.
ಆದರೆ ಕ್ರೇನ್ ಕೂಡ ಸಮುದ್ರ ಕಿನಾರೆಗೆ ಬಂದರೆ ಅದೂ ಮರಳಲ್ಲಿ ಸಿಲುಕುವ ಸಾಧ್ಯತೆಯಿದ್ದರಿಂದ ಆ ಯೋಜನೆ ಕೂಡ ಕೈ ತಪ್ಪಿ ಹೋಯಿತು.
ಕೊನೆಗೆ ಸ್ಥಳೀಯರು ರಕ್ಷಣೆಗೆ ಮುಂದಾಗಿ ಕಾರನ್ನು ಮೇಲೆತ್ತಿ ದಡಕ್ಕೆ ತರುವಲ್ಲಿ ಯಶಸ್ವಿಯಾದರು. ಮೀನುಗಾರ ಮುಂದಾಳು ಶ್ರೀಕಾಂತ್ ಸಾಲ್ಯಾನ್ ಗುಡ್ಡೆ ಕೊಪ್ಲ, ಕುಮಾರ್ ಸಾಲ್ಯಾನ್ ಗುಡ್ಡೆಕೊಪ್ಲ ಮೊದಲಾದವರು ಸಹಕರಿಸಿದರು.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment