ಮಂಗಳೂರು: ದಕ್ಷಿಣ ಕನ್ನಡ ಜಿಲ್ಲ್ಲಾ ಗೃಹರಕ್ಷಕದಳದ 15 ಘಟಕಗಳ ಘಟಕಾಧಿಕಾರಿಗಳ ಸಭೆ ನಗರದ ಮೇರಿಹಿಲ್ನಲ್ಲಿರುವ ಗೃಹರಕ್ಷಕ ದಳದ ಕಛೇರಿಯಲ್ಲಿ ಇಂದು (ಜು.23) ಜರುಗಿತು. ಗೃಹರಕ್ಷಕ ದಳದ ಸಮಾದೇಷ್ಠರಾದ ಡಾ|| ಮುರಲೀ ಮೋಹನ್ ಚೂಂತಾರು ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಹೊಸ ಗೃಹರಕ್ಷಕರನ್ನು ನೊಂದಾಯಿಸುವ ಬಗ್ಗೆ ಹಾಗೂ ನಿಷ್ಕ್ರೀಯ ಗೃಹರಕ್ಷಕರನ್ನು ಸಮಾಲೋಪನೆಗೊಳಿಸುವ ಕುರಿತು ಚರ್ಚಿಸಲಾಯಿತು. ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಕೇಂದ್ರ ಕಛೇರಿಗೆ ಶಿಫಾರಸ್ಸು ಮಾಡುವ ಬಗ್ಗೆ ಎಲ್ಲಾ ಘಟಕಾಧಿಕಾರಿಗಳ ಅಭಿಪ್ರಾಯವನ್ನು ಪಡೆದುಕೊಳ್ಳಲಾಯಿತು. ಮಂಗಳೂರಿನಲ್ಲಿ ಮಹಿಳಾ ಘಟಕ ಪ್ರಾರಂಭಿಸುವ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ 2018 ರಿಂದ 2020ರ ಸಾಲಿನಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಸಮಾದೇಷ್ಟರಾದ ಡಾ: ಮುರಲೀ ಮೋಹನ್ ಚೂಂತಾರು ಹಾಗೂ ಬೆಳ್ತಂಗಡಿ ಘಟಕದ ಸೆಕ್ಷನ್ ಲೀಡರ್ ಅಪ್ಪು, ಬೆಳ್ಳಾರೆ ಘಟಕದ ಗೃಹರಕ್ಷಕ ಹೂವಪ್ಪ ಗೌಡ, ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಭಾಸ್ಕರ್ ಇವರನ್ನು ಸನ್ಮಾನಿಸಲಾಯಿತು.
ಈ ಸಭೆಯಲ್ಲಿ ಉಪಸಮಾದೇಷ್ಠರಾದ ರಮೇಶ್, ಕಛೇರಿಯ ಅಧೀಕ್ಷಕರಾದ ರತ್ನಾಕರ್ ಮತ್ತು ಪ್ರಥಮ ದರ್ಜೆ ಸಹಾಯಕರಾದ ಅನಿತಾ ರವರು ಉಪಸ್ಥಿತರಿದ್ದರು. ವಿವಿಧ ಘಟಕಗಳ ಘಟಕಾಧಿಕಾರಿಗಳಾದ ಮಾರ್ಕ್ಶೇರ್, ಮಂಗಳೂರು ಘಟಕ, ನಾರಾಯಣ ಸುಬ್ರಹ್ಮಣ್ಯ ಘಟಕ, ಪ್ರಭಾರ ಘಟಕಾಧಿಕಾರಿಗಳಾದ ಎಂ. ಭಾಸ್ಕರ್, ಉಳ್ಳಾಲ ಘಟಕ, ಪಾಂಡಿರಾಜ್, ಮೂಡಬಿದ್ರಿ ಘಟಕ, ಲೋಕೇಶ್, ಮೂಲ್ಕಿ ಘಟಕ, ಐತಪ್ಪ ಬಂಟ್ವಾಳ ಘಟಕ, ದಿನೇಶ್ ಉಪ್ಪಿನಂಗಡಿ ಘಟಕ, ರಮೇಶ್ ಸುರತ್ಕಲ್ ಘಟಕ, ಸಂಜೀವ, ವಿಟ್ಲ ಘಟಕ, ಜಯಂತ್ ಶೆಟ್ಟಿ, ಸುಳ್ಯ ಘಟಕ, ಪಿ.ವಸಂತ ಕುಮಾರ್ ಬೆಳ್ಳಾರೆ ಘಟಕ, ತೀರ್ಥೇಶ್, ಕಡಬ ಘಟಕ ಇವರುಗಳು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಉಪಸಮಾದೇಷ್ಠರಾದ ರಮೇಶ್ ರವರು ಸ್ವಾಗತಿಸಿದರು ಮತ್ತು ಕಛೇರಿಯ ಅಧೀಕ್ಷಕರಾದ ರತ್ನಾಕರ್ ಅವರು ವಂದಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
إرسال تعليق