ಗೃಹರಕ್ಷಕ ದಳ ಕಛೇರಿಯಲ್ಲಿ ವನಮಹೋತ್ಸವ; ಲಯನ್ಸ್ ಕ್ಲಬ್ ಮಂಗಳೂರು ಹಾಗೂ ಲಿಯೋ ಕ್ಲಬ್ ಮಂಗಳೂರು ಸಹಕಾರ
ಮಂಗಳೂರು: ಜಿಲ್ಲಾ ಗೃಹರಕ್ಷಕದಳ ಮೇರಿಹಿಲ್ ಮಂಗಳೂರು ಇದರ ಕಛೇರಿಯ ಆವರಣದಲ್ಲಿ ಗೃಹರಕ್ಷಕದಳ ಮತ್ತು ಪೌರರಕ್ಷಣೆ ಪಡೆ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಮತ್ತು ಲಿಯೋ ಕ್ಲಬ್ ಮಂಗಳೂರು ಇವರ ಸಹಕಾರದೊಂದಿಗೆ ಸಸಿ ನೆಡುವ ಕಾರ್ಯಕ್ರಮ ಗೃಹರಕ್ಷಕದಳದ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರ ಅಧ್ಯಕ್ಷತೆಯಲ್ಲಿ ಇಂದು (ಜು.23) ಜರುಗಿತು.
ಈ ಸಂದರ್ಭ ಖ್ಯಾತ ಪರಿಸರವಾದಿ ಅರಣ್ಯ ಮಿತ್ರ ಪ್ರಶಸ್ತಿ ವಿಜೇತ ಮಾಧವ ಉಳ್ಳಾಲ ಇವರು ಗೃಹರಕ್ಷಕ ದಳದಿಂದ ಪ್ರತೀ ವರ್ಷ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಇವರು ಪರಿಸರ ರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಪ್ರತಿಯೊಬ್ಬರೂ ವಿಶ್ವ ಪರಿಸರ ದಿನದ ಅಂಗವಾಗಿ ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಮಾಡಬೇಕು ಎಂದು ಕರೆ ನೀಡಿದರು. ಗಿಡ ನೆಡುವುದು ಮಾತ್ರವಲ್ಲ, ಪರಿಸರ ರಕ್ಷಣೆ, ಗಿಡ ಮರಗಳ ಪೋಷಣೆ ಪ್ರತಿಯೊಬ್ಬ ಪ್ರಜೆಯ ಸಾಮಾಜಿಕ ಹೊಣೆಗಾರಿಕೆ ಎಂದರು.
ಜಿಲ್ಲೆಯಾದ್ಯಂತ 1000 ಗೃಹರಕ್ಷಕರಿದ್ದು, ಪ್ರತಿ ವರ್ಷ ಪ್ರತಿಯೊಬ್ಬ ಗೃಹರಕ್ಷಕರು ಒಂದು ಗಿಡ ನೆಟ್ಟಲ್ಲಿ ಸುಂದರ ಸಮೃದ್ಧ ಪರಿಸರ ಸೃಷ್ಟಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಇನ್ನೋರ್ವ ಪರಿಸರವಾದಿ ಕೃಷ್ಣಪ್ಪ ಪಿ. ಇವರು ಪರಿಸರ ಸಂರಕ್ಷಣೆಯ ಘೋಷಣೆಯನ್ನು ಮಾಡಿದರು. ಇವರು ಪರಿಸರ ಜಾಗೃತಿಯನ್ನು ನಿರಂತರವಾಗಿ ಮಾಡುತ್ತಿರುತ್ತಾರೆ. ಪರಿಸರದಲ್ಲಿ ಎಲ್ಲೆಲ್ಲಿ ಖಾಲಿ ಜಾಗವಿದೆ ಅಲ್ಲಿ ಗಿಡಗಳನ್ನು ನೆಟ್ಟು ಬೆಳೆಸಬೇಕು ಎಂದು ಇವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಲ|| ಸತೀಶ್ ರೈ, ಖಜಾಂಚಿಯಾದ ಡೆನ್ನಿಸ್ ರಾಡ್ರಿಗಸ್, ಜೊತೆಕಾರ್ಯದರ್ಶಿಯಾದ ಸುಧಾಮ ರೈ, ಸೇವಾ ಸಹಯೋಜಕರಾದ ರಿಚರ್ಡ್ ಲೋಬೋ, ಸಹಯೋಜಕರಾದ ರಾಜೇಶ್ ವಿಕ್ಟರ್ ಹೇರಿ, ಲಯನ್ಸ್ ಸದಸ್ಯೆ ನ್ಯಾನ್ಸಿ ಮಸ್ಕರೇನಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಲಿಯಾ ಅಕ್ವಿನಸ್, ಲಿಯೋ ಕಾರ್ಯದರ್ಶಿ ಕ್ರಿಸ್ಟಿನ್ ಹೇರಿ, ಲಿಯೋ ಸದಸ್ಯರಾದ ಹ್ಯಾಂಡ್ರಿಯಾ ಹೇರಿ, ಹಾಗೂ ರಾಮಚಂದ್ರ ಭಟ್, ನಿವೃತ್ತ ಸೈನಿಕ ಇವರುಗಳು ಗಿಡಗಳನ್ನು ನೆಡುವುದರ ಮೂಲಕ ಸಾಂಕೇತಿಕವಾಗಿ ಪರಿಸರ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಉಪಸಮಾದೇಷ್ಟರಾದ ರಮೇಶ್, ಕಛೇರಿ ಅಧೀಕ್ಷಕರಾದ ರತ್ನಾಕರ್, ಸುರತ್ಕಲ್ ಘಟಕದ ಪ್ರಭಾರ ಘಟಕಾಧಿಕಾರಿ ರಮೇಶ್, ಬಂಟ್ವಾಳ ಘಟಕದ ಘಟಕಾಧಿಕಾರಿ ಐತ್ತಪ್ಪ, ಸುಬ್ರಹ್ಮಣ್ಯ ಘಟಕದ ಘಟಕಾಧಿಕಾರಿ ನಾರಾಯಣ ಉಪ್ಪಿನಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ., ಪುತ್ತೂರು ಘಟಕದ ಜಗನ್ನಾಥ ಪಿ., ಕಡಬ ಘಟಕದ ಪ್ರಭಾರ ಘಟಕಾಧಿಕಾರಿ ತೀರ್ಥೇಶ್, ಬೆಳ್ಳಾರೆ ಘಟಕದ ಹೂವಪ್ಪ, ಗೃಹರಕ್ಷಕರಾದ ಸುನಿಲ್ ಕುಮಾರ್, ಸುನಿಲ್ ಪೂಜಾರಿ, ಕನಕಪ್ಪ, ಪ್ರಸಾದ್, ನಿಖಿಲ್, ಮಹಮ್ಮದ್ ಫಯಾಜ್, ದಿವಾಕರ್, ದುಷ್ಯಂತ್ ರೈ, ಜಯಲಕ್ಷ್ಮಿ ಇವರುಗಳು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق