ಮೈಸೂರು: ಕೋವಿಡ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಸಾವಿಗೀಡಾದ ಮಹಿಳೆಯೊಬ್ಬರ ಚಿನ್ನಾಭರಣ ನಾಪತ್ತೆಯಾಗಿರುವ ಘಟನೆ ನಡೆಯಿತು.
ಮೈಸೂರಿನ ಎಂ.ಕೆ. ಯಶವಂತ್ ಕುಮಾರ್ ಅವರು ಈ ಬಗ್ಗೆ ದೂರು ದಾಖಲಿಸಿದ್ದಾರೆ.
ಯಶವಂತ್ ಅವರ ತಾಯಿ ಗೌರಮ್ಮ ಕೋವಿಡ್‌ನಿಂದಾಗಿ ಜೆ.ಪಿ. ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಗೌರಮ್ಮ ಅವರು ಆಸ್ಪತ್ರೆ ಸೇರಿದಾಗ 4 ಚಿನ್ನದ ಬಳೆ, ಒಂದು ಉಂಗುರ, 2 ಓಲೆ ಮತ್ತು ಕೊರಳಿನಲ್ಲಿ ಒಂದು ಚಿನ್ನದ ಸರ ಧರಿಸಿದ್ದರು.
ಬಿಲ್ ಪಾವತಿಸಿದ ನಂತರ ನಿಮ್ಮ ತಾಯಿಯವರ ಒಡವೆಗಳನ್ನು ನೀಡುತ್ತೇವೆಂದು ಆಸ್ಪತ್ರೆಯ ಸಿಬ್ಬಂದಿ ಯಶವಂತ್ ಕುಮಾರ್ ಗೆ ತಿಳಿಸಿದ್ದರು. ಆದರೆ, 25 ಗ್ರಾಂ ತೂಕದ ಚಿನ್ನದ ಸರವನ್ನು ಬಿಟ್ಟು ಎಲ್ಲವನ್ನೂ ಹಿಂತಿರುಗಿಸಿ ಕೊಟ್ಟಿದ್ದಾರೆ.
ಸರದ ಬಗ್ಗೆ ಕೇಳಿದಾಗ ನಮಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ ಆಸ್ಪತ್ರೆಯ ಸಿಬ್ಬಂದಿ. ಈ ಬಗ್ಗೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment