ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆಸ್ಪತ್ರೆಯಲ್ಲಿ ಕೋವಿಡ್ ಗೆ ಸಾವಿಗೀಡಾದ ಮಹಿಳೆಯ ಚಿನ್ನಾಭರಣ ನಾಪತ್ತೆ

ಆಸ್ಪತ್ರೆಯಲ್ಲಿ ಕೋವಿಡ್ ಗೆ ಸಾವಿಗೀಡಾದ ಮಹಿಳೆಯ ಚಿನ್ನಾಭರಣ ನಾಪತ್ತೆ

 


ಮೈಸೂರು: ಕೋವಿಡ್‌ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಸಾವಿಗೀಡಾದ ಮಹಿಳೆಯೊಬ್ಬರ ಚಿನ್ನಾಭರಣ ನಾಪತ್ತೆಯಾಗಿರುವ ಘಟನೆ ನಡೆಯಿತು.


ಮೈಸೂರಿನ ಎಂ.ಕೆ. ಯಶವಂತ್ ಕುಮಾರ್ ಅವರು ಈ ಬಗ್ಗೆ ದೂರು ದಾಖಲಿಸಿದ್ದಾರೆ.


ಯಶವಂತ್‌ ಅವರ ತಾಯಿ ಗೌರಮ್ಮ ಕೋವಿಡ್‌ನಿಂದಾಗಿ ಜೆ.ಪಿ. ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.


ಗೌರಮ್ಮ ಅವರು ಆಸ್ಪತ್ರೆ ಸೇರಿದಾಗ 4 ಚಿನ್ನದ ಬಳೆ, ಒಂದು ಉಂಗುರ, 2 ಓಲೆ ಮತ್ತು ಕೊರಳಿನಲ್ಲಿ ಒಂದು ಚಿನ್ನದ ಸರ ಧರಿಸಿದ್ದರು. 


ಬಿಲ್ ಪಾವತಿಸಿದ ನಂತರ ನಿಮ್ಮ ತಾಯಿಯವರ ಒಡವೆಗಳನ್ನು ನೀಡುತ್ತೇವೆಂದು ಆಸ್ಪತ್ರೆಯ ಸಿಬ್ಬಂದಿ ಯಶವಂತ್ ಕುಮಾರ್​ ಗೆ ತಿಳಿಸಿದ್ದರು. ಆದರೆ, 25 ಗ್ರಾಂ ತೂಕದ ಚಿನ್ನದ ಸರವನ್ನು ಬಿಟ್ಟು ಎಲ್ಲವನ್ನೂ ಹಿಂತಿರುಗಿಸಿ ಕೊಟ್ಟಿದ್ದಾರೆ.


ಸರದ ಬಗ್ಗೆ ಕೇಳಿದಾಗ ನಮಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ ಆಸ್ಪತ್ರೆಯ ಸಿಬ್ಬಂದಿ. ಈ ಬಗ್ಗೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم