ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹೆಣ್ಣು ಮಗು ಹುಟ್ಟಿತೆಂದು ದೇವಾಲಯದ ಬಳಿ ಬಿಟ್ಟು ಹೋದ ಪೋಷಕರು

ಹೆಣ್ಣು ಮಗು ಹುಟ್ಟಿತೆಂದು ದೇವಾಲಯದ ಬಳಿ ಬಿಟ್ಟು ಹೋದ ಪೋಷಕರು

 


ಬಳ್ಳಾರಿ: ಹುಟ್ಟಿದ ಮಗು ಹೆಣ್ಣೆಂಬ ಕಾರಣಕ್ಕೆ ನವಜಾತ ಶಿಶುವನ್ನು ದೇವಸ್ಥಾನದ ಬಳಿ ಬಿಟ್ಟು ಹೋಗಿರುವ ಘಟನೆಯೊಂದು ಜಿಲ್ಲೆಯ ಸಿರಗುಪ್ಪ ತಾಲೂಕಿನ ಬಂಡ್ರಾಳು ಗ್ರಾಮದಲ್ಲಿ ನಡೆದಿದೆ. 


ಬಂಡ್ರಾಳು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ಶಿಶುವನ್ನು ಬಿಟ್ಟು ಹೋಗಿದ್ದಾರೆ. ನವಜಾತ ಶಿಶು ಹೆಣ್ಣು ಮಗು ಆದ ಕಾರಣ ದೇವಾಲಯದ ಬಳಿ ಬಿಟ್ಟು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.


ಸ್ಥಳೀಯರು ದೇವಸ್ಥಾನಕ್ಕೆ ಆಗಮಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ, ವಿಷಯ ತಿಳಿದು ಸ್ಥಳಕ್ಕೆ ವೈದ್ಯಾಧಿಕಾರಿ ಡಾ. ವಿದ್ಯಾಶ್ರೀ ಮತ್ತು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಜಲಾಲಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಗರ್ಭಾವಸ್ಥೆ ಪೂರ್ಣವಾಗದೆ ಅಕಾಲಿಕವಾಗಿ ಮಗು ಜನಿಸಿದ್ದು, ಮಗುವಿನ ತೂಕ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಮಗುವನ್ನು ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ಪೋಷಣೆ ಮಾಡಲಾಗುತ್ತಿದೆ.

0 Comments

Post a Comment

Post a Comment (0)

Previous Post Next Post